ಎಲಿಮಲೆ ಮಸೀದಿ ಯ ಅಧೀನದಲ್ಲಿ ಆಧ್ಯಾತ್ಮಿಕ ಸ್ವಲಾತ್ ಮಜ್ಲಿಸ್ ಹಾಗೂ ಹಯಾತುಲ್ ಇಸ್ಲಾಂ ಇಕ್ರಾಮುಸ್ಸುನ್ನ ದರ್ಸ್ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಎಲಿಮಲೆ ಅಬ್ದುರಿಯಾಝ್ ಮಸೀದಿಯಲ್ಲಿ ಜರಗಿತು.
ಳುಹರ್ ನಮಾಜಿನ ಬಳಿಕ ನಡೆದ ಕಾರ್ಯಕ್ರಮದಲ್ಲಿ
ಎಲಿಮಲೆಯ ನೂತನ ಖತೀಬರೂ ಮುದರ್ರಿಸರೂ ಆದ ಆಧ್ಯಾತ್ಮಿಕ ಗುರುಗಳೂ ಆಗಿರುವ ಸಯ್ಯದ್ ಮುಹ್ಸಿನ್ ತಂಙಳ್ ಕಲ್ಲೇರಿ (ಕುಂಜಿಲಂ ತಂಙಳ್) ಇವರು ನೂತನವಾಗಿ ನೇತೃತ್ವ ವಹಿಸಿರುವ ದರ್ಸ್ ತರಗತಿಗೆ
ಹಿರಿಯ ವಿಧ್ವಾಂಸರಾದ ಝೈನುಲ್ ಉಲಮಾ ಮಾಣಿ ಉಸ್ತಾದರು ಚಾಲನೆಯನ್ನು ನೀಡಿ ಶುಭಹಾರೈಸಿದರು.
ಮಗ್ರಿಬ್ ನಮಾಜಿನ ಬಳಿಕ ನಡೆದ ಸ್ವಲಾತ್ ಮಜ್ಲಿಸ್ ಹಾಗೂ ಪ್ರಾರ್ಥನಾ ಸಂಗಮವು
ನೂರುಸ್ಸಾದಾತ್ ಬಾಯಾರ್ ತಂಙಳ್ ರವರ ನೇತೃತ್ವದಲ್ಲಿ ಜರುಗಿತು. ಸಮಾರಂಭದಲ್ಲಿ ಪ್ರಸಿದ್ಧ ವಾಗ್ಮಿ ಹಂಝ ಮಿಸ್ಬಾಹಿ ಓಟೆಪದವುರವರು ಧಾರ್ಮಿಕ ಶಿಕ್ಷಣದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಜಮಾಅತ್ ಕಮಿಟಿ ಅಧ್ಯಕ್ಷ ಪಾಣಾಜೆ ಅಬ್ದುಲ್ ಕಾದರ್ ಅಧ್ಯಕ್ಷತೆ ವಹಿಸಿದ್ದರು .
ಮುಖ್ಯ ಅತಿಥಿಗಳಾಗಿ ಅನಸ್ ಅಝ್ಹರಿ ಪೊಯ್ಯತ್ತಬಯಲ್, ಎಲಿಮಲೆ ನುಸ್ರತ್ ಅಧ್ಯಕ್ಷ ಲತೀಫ್ ಹರ್ಲಡ್ಕ, ಮುಹ್ಯದ್ದೀನ್ ಮಸೀದಿ ಜೀರ್ಮುಕ್ಕಿ ಅಧ್ಯಕ್ಷ ಅಬ್ದುಲ್ಲ ಜಿ.ಎಸ್.
ಜೀರ್ಮುಕ್ಕಿ ಇಮಾಂ ಅಶ್ರಫ್ ಜೌಹರಿ ಕುಂಭಕ್ಕೋಡು, ಎಲಿಮಲೆ ಸದರ್ ಮುಅಲ್ಲಿಂ ಫೈಝಲ್ ಝುಹ್ರಿ, ಮೆತ್ತಡ್ಕ ಸದರ್ ಫವಾಝ್ ಹಿಮಮಿ ಮೇನಾಲ , ಎಲಿಮಲೆ ಮಸೀದಿ ಮಾಜಿ ಅಧ್ಯಕ್ಷ ಮೂಸ ಹಾಜಿ,ಕಾರ್ಯದರ್ಶಿ ಸಿದ್ದೀಕ್ ಎಲಿಮಲೆ, ಕೋಶಾಧಿಕಾರಿ ಇಬ್ರಾಹಿಂ ಜೀರ್ಮುಕ್ಕಿ, ಸೂಫಿ ಮುಸ್ಲಿಯಾರ್, ಜುನೈದ್ ಸಖಾಫಿ ಉಪಸ್ಥಿತರಿದ್ದರು .
ಇದೇ ಸಂಧರ್ಭದಲ್ಲಿ ಕಲ್ಲೇರಿ ಹಾಗೂ ಎಲಿಮಲೆ ಜಮಾಅತರ ಪರವಾಗಿ ಸಯ್ಯಿದ್ ರವರನ್ನು ಸನ್ಮಾನಿಸಲಾಯಿತು.
ಮಹಮೂದ್ ಸಖಾಫಿ ಎಲಿಮಲೆ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಲಿಮಲೆ ದರ್ಸ್ ವಿಧ್ಯಾರ್ಥಿಗಳಿಂದ ಆಕರ್ಷಕ ಬುರ್ದಾ ನಅತ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.