ವಿಧಾನ ಪರಿಷತ್ ಚುನಾವಣೆ : ಎನ್.ಡಿ.ಎ. ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ, ಎಸ್.ಎಲ್. ಭೋಜೇಗೌಡ ಸುಳ್ಯ ಭೇಟಿ

0

ವಿಧಾನಸಭಾ ಪರಿಷತ್ ನ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಪ್ರತಿನಿಧಿ ಕ್ಷೇತ್ರಕ್ಕೆ ಜೂ.3ರಂದು ಚುನಾವಣೆ ನಡೆಯಲಿದ್ದು ಎನ್.ಡಿ.ಎ. ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್. ಭೋಜೇಗೌಡ ರು ಸುಳ್ಯಕ್ಕೆ ಭೇಟಿ‌ ನೀಡಿದರು.

ಬಿಜೆಪಿ ಕಚೇರಿಯಲ್ಲಿ ‌ನಡೆದ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಸಂಘಟನೆಯ ಶಕ್ತಿಯಿಂದಲೇ ನಮ್ಮ ಪಕ್ಷ ಕೆಲಸ ಮಾಡಿದೆ. ನಾನು ಸಂಘಟನೆಯ ಮೂಲಕವೇ ಬಂದವನು. ಈ ಚುನಾವಣೆಯ ನನಗೆ ಅವಕಾಶ ನೀಡಿದ್ದಾರೆ. ನಮ್ಮನ್ನು ಬಹುಮತದಿಂದ ಗೆಲ್ಲಿಸಿ. ನಾವು ಪ್ರಾಮಾಣಿಕ ವಾಗಿ ಸೇವೆ ಮಾಡುತ್ತೇವೆ” ಎಂದವರು‌ ಹೇಳಿದರು.

ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ ಭೋಜೇಗೌಡರು‌ ಮಾತನಾಡಿ, ಶಿಸ್ತು ಮತ್ತು ಸಂಘಟನೆಗೆ ಹೆಸರಾದ ಪಕ್ಷ ಬಿಜೆಪಿ. ನೀವೆಲ್ಲರೂ ಈ ಬಾರಿ ನಮ್ಮನ್ನು ಬಹುಮತದಿಂದ ಗೆಲ್ಲಿಸುತ್ತೀರೆಂಬ ವಿಶ್ವಾಸ ಇದೆ. ವಿಧಾನ ಪರಿಷತ್ ನಲ್ಲಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುವೇ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಉಳಿದೊಟ್ಟು, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಬಿಜೆಪಿ ಪ್ರಕೋಷ್ಠದ ರಾಜ್ಯ ಸಂಚಾಲಕ ದತ್ತಾತ್ರೇಯ ಶಿವಮೊಗ್ಗ, ರಕ್ಷಿತ್ ಸುವರ್ಣ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ವೇದಿಕೆಯಲ್ಲಿದ್ದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂದಡ್ಕ ಹಾಗೂ ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿದರು.