ಕರ್ನಾಟಕ ರಾಜ್ಯ ವಖ್ಫ್ ಮಂಡಳಿಯಲ್ಲಿ ನೊಂದಾವಣಿಯಾದ ದ.ಕ ಜಿಲ್ಲೆಯ ಎಲ್ಲಾ ವಖ್ಫ್ ಸಂಸ್ಥೆಗಳು ಬೈಲಾ ಫಾರಂ ನಿಯಮ ನಿಗದಿತ ನಮೂನೆ ಸಂಖ್ಯೆ 42 ರ ಅರ್ಜಿ ಫಾರಂ ಸಂಬಂಧಪಟ್ಟ ದಾಖಲೆಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಕಚೇರಿಗೆ ಅತಿ ಶೀಘ್ರವಾಗಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ಮಾನ್ಯ ಉಚ್ಛ ನ್ಯಾಯಾಲಯವು 2024 ಏಪ್ರಿಲ್ 23 ರಂದು ಈ ಆದೇಶವನ್ನು ನೀಡಿದ್ದು ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿಗೆ ಸಂಬಂಧಪಟ್ಟ ದಾಖಲೆಗಳಾದ ವಕ್ಫ್ ನೊಂದಾಯಿತ ಗೊಂಡಿರುವ ಧ್ರಡೀಕರಣ ಪತ್ರ , ಮಸೀದಿಗಳ ದಾಖಲೆ ಪತ್ರ ( Sale Deed ಸರ್ಕಾರಿ ಆದೇಶ) , ಸಂಸ್ಥೆಗಳ ಪಹಣಿ ಪತ್ರ (9/11) ಸ್ಥಳದ ನಕ್ಷೆ , ಕವಚ ಪತ್ರ (ವಕ್ಫ್ ಸಂಸ್ಥೆಯಿಂದ ಕೋರಿಕೆ ಪತ್ರ) ಸರಕಾರದಿಂದ ಪಡೆದಿರುವಂತಹ ಮಸೀದಿಗಳ ದಾಖಲೆ ಪತ್ರ, ಮಹಾಸಭೆಯ ಅಥವಾ ಸಾಮಾನ್ಯ ಸಭೆಯ ನಡವಳಿ ಇತ್ಯಾದಿ ದಾಖಲೆಗಳೊಂದಿಗೆ ಏಳು ದಿನಗಳ ಒಳಗೆ ಜಿಲ್ಲಾ ವಕ್ಫ್ ಕಛೇರಿಗೆ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಜಿಲ್ಲಾ ವಖ್ಫ್ ಅಧಿಕಾರಿ ತಿಳಿಸಿದ್ದಾರೆ.
ನಮೂನೆ ಸಂಖ್ಯೆ 42 ರ ಅರ್ಜಿ ಫಾರಂ ಇಲ್ಲದಿದ್ದಲ್ಲಿ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.