ಭಾರತ ಸರಕಾರದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜನ್ಸಿ ಭಾರತ್ ಸೇವಕ ಸಮಾಜದ ಅಂಗೀ ಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ 2023-24ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ(ಡಿ.ಎಂ.ಇ.ಡಿ) ಪೂರ್ಣಿಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ರಾಜ್ಯದ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆಯಾಗಿದ್ದಾರೆ.
ಕಾಂಚನ ಕೆವಿಜಿ ಐಪಿಸ್ ಸುಳ್ಯ, ಪೂರ್ಣಿಮಾ ವಿದ್ಯಾರಶ್ಮಿ ವಿದ್ಯಾಲಯ ಸವಣೂರು, ಫಾತಿಮತ್ ರೋಝ ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟು, ಮೇಘನಾ ಕೆ. ಎಸ್ ಪಾಂಚಜನ್ಯ ಪಬ್ಲಿಕ್ ಸ್ಕೂಲ್ ಕೆ ಆರ್ ಪೇಟೆ ಮಂಡ್ಯ, ಗುಣಶ್ರೀ ಗಜಾನನ ಇಂಗ್ಲೀಷ್ ಮೀಡಿಯಂ ಸ್ಕೂಲ್ ಈಶ್ವರಮಂಗಲ, ಸುಚಿತ್ರಾ ಪಾಂಚಜನ್ಯ ಪಬ್ಲಿಕ್ ಸ್ಕೂಲ್ ಕೆ ಆರ್ ಪೇಟೆ ಮಂಡ್ಯ, ಫಾತಿಮತ್ ತೌಸೀರ ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು, ಗ್ರೀಷ್ಮ ಕೆ. ಎಸ್. ಜಿ ಆಂಗ್ಲ ಮಾಧ್ಯಮ ಶಾಲೆ ನಿಂತಿಕಲ್, ಶಾಹಿನಾ ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ, ರಚನಾ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು, ಐಶ್ವರ್ಯರಾಜ್ ದಾರುಲ್ ಹಿಕ್ಮ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ, ಪ್ರಮೀಳಾ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಸುಳ್ಯ, ರಕ್ಷಿತಾ ಮೌಂಟ್ ಜಿಯೋನ್ ಪಬ್ಲಿಕ್ ಸ್ಕೂಲ್ ನೆಟ್ಟಣ, ರಂಜಿತಾ ಅಂಜಲಿ ಮೊಂಟೆಸ್ಸರಿ ಸ್ಕೂಲ್ ಸುಳ್ಯ ಇಲ್ಲಿಗೆ ಆಯ್ಕೆಯಾಗಿದ್ದಾರೆ. ಸಂಸ್ಥೆಯಲ್ಲಿ 2024-25ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಆರಂಭಗೊಂಡಿದ್ದು, ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.