ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿಯನ್ನು 2022-23ನೇ ಸಾಲಿನಿಂದ ರಾಜ್ಯ ವಸತಿನಿಲಯ ಪೋರ್ಟಲ್(SHP) ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಪುಸಕ್ತ ಸಾಲಿನಲ್ಲಿ https://shp.karnataka.gov.in/ ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಯು ಆದ್ದರಿಂದ ಈಗಾಗಲೇ ಶಾಲಾ ಕಾಲೇಜುಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಕೋರಿ ಬಂದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಭೌತಿಕವಾಗಿ ಅರ್ಜಿಗಳನ್ನು ಪಡೆದು ವಿವಿಧ ವರ್ಗಗಳ ಮೀಸಲಾತಿಯನ್ವಯ ವಸತಿ ಸೌಲಭ್ಯ ಕಲ್ಪಿಸಲು ಹಾಗೂ ರಾಜ್ಯ ವಸತಿನಿಲಯ ಪೋರ್ಟಲ್(SHP) ಮುಖಾಂತರ ಹಾಸ್ಟೆಲ್ ಪ್ರವೇಶಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ ನಂತರ ಈಗಾಗಲೇ ಬೌತಿಕ ಅರ್ಜಿಗಳ ಆಧಾರದ ಮೇರೆಗೆ ವಸತಿ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ನಿಯಮಾನುಸಾರ ಕ್ರಮ ವಹಿಸಿ ಈಗಾಗಲೇ ವಸತಿ ಸೌಲಭ್ಯ ಕಲ್ಪಿಸಿರುವ ಹಾಸ್ಟೆಲ್‌ಗೆ Seat Allotment ಮಾಡಿಕೊಳ್ಳುವಂತೆ ಸೂಚಿಸಿದೆ.