ಸುಬ್ರಹ್ಮಣ್ಯದ ರೋಟರಿ ಕ್ಲಬ್ಬಿನ ಕಾರ್ಯ ನಿಕಟ ಪೂರ್ವ ಕಾರ್ಯದರ್ಶಿ, ಕ್ರಿಯಾಶೀಲ ಕೆಲಸಗಾರ ,ಸಮಾಜ ಸೇವಕ, ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾ. ರವಿ ಕಕ್ಕೆಪದವು ಅವರಿಗೆ ರೋಟರಿ ಜಿಲ್ಲೆ 31 81ರ ಈ ವರ್ಷದ ತೆರೆಮರೆಯ ನಾಯಕ ಪ್ರಶಸ್ತಿ ಲಭಿಸುತ್ತದೆ.
ಜೂ. 8 – 9ರಂದು ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆ 31 81 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ರೋಟರಿ ಜಿಲ್ಲಾ ಗವರ್ನರ್ ಕೇಶವ ರವರು ನೀಡಿರುತ್ತಾರೆ. ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ, ನಿಯೋಜಿತ ಜಿಲ್ಲಾ ಗವರ್ನರ್ ವಿಕ್ರಮ ದತ್ತ, ಅಸಿಸ್ಟೆಂಟ್ ಗವರ್ನರ್ ಪುರಂದರ ರೈ, ಹಾಗೂ ಜಿಲ್ಲಾ ಪದಾಧಿಕಾರಿಗಳು, ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಪ್ರಶಾಂತ್ ಕೋಡಿಬೈಲ್, ಕಾರ್ಯದರ್ಶಿ ಮೋಹನ್ ದಾಸ್ ಎಣ್ಣೆಮಜಲು, ನಿಯೋಜಿತ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಹಾಜರಿದ್ದರು.
ಬಹು ಉಪಕಾರಿ ರವಿಕಕ್ಕೆಪದವು
ಡಾ. ರವಿ ಕಕ್ಕೆ ಪದವು ಅವರು ಅದೆಷ್ಟೋ ಶಾಲೆಗಳಿಗೆ ಪುಸ್ತಕ ವಿತರಣೆ ,ಯುನಿಫಾರಂ, ಪ್ರತಿ ವರ್ಷ ನೀಡುತ್ತಾ ಬರುತಿದ್ದು. ಬಡತನದಲ್ಲಿರುವವರಿಗೆ ಅಕ್ಕಿ ಹಾಗೂ ದಿನಸಿ ಸಾಮಗ್ರಿಗಳನ್ನು ನೀಡುತ್ತಾ ಬರುತಿದ್ದಾರೆ. ಬಡವರಿಗೆ ,ಸೂರಿಲ್ಲದವರಿಗೆ ತನ್ನ ಜಾಗವನ್ನೇ ಸ್ವಲ್ಪ ಕೊಟ್ಟು ಮನೆ ಕಟ್ಟಲು ಅನುವು ಮಾಡಿ ಕೊಟ್ಟಿರುತ್ತಾರೆ. ತೀರಾ ಬಡತನದಲ್ಲಿರುವವರಿಗೆ ಮನೆಯನ್ನೇ ನಿರ್ಮಿಸಿ ಕೊಟ್ಟಿರುವುದು . ಸ್ವಚ್ಛತೆಗೆ ಆದ್ಯತೆ ಕೊಟ್ಟ ಅವರು ಪ್ರತಿವಾರ ಕುಕ್ಕೆ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯವನ್ನು ಸಮಾಜ ಸೇವಾ ಟ್ರಸ್ಟ್ ಮೂಲಕ ನಡೆಸಿಕೊಂಡು ಬಂದಿರುತ್ತಾರೆ. ಇದನ್ನು ಪರಿಗಣಿಸಿದ ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 31 81 ರವರು ತೆರೆ ಮರೆಯ ನಾಯಕ ಎಂಬ ಬಿರುದನ್ನು ನೀಡಿ ಗೌರವಿಸಿರುತ್ತದೆ .