ನಿವೃತ್ತಿಗೊಂಡ ಶಿಕ್ಷಕಿಯಿಂದ ಧತ್ತಿನಿಧಿ ಘೋಷಣೆ, ಶಾಲೆಗೆ ಕಪಾಟು – ಮಕ್ಕಳಿಗೆ ಟಿಫಿನ್ ಬಾಕ್ಸ್ ಕೊಡುಗೆ
ಜಾಲ್ಸೂರಿನ ಕದಿಕಡ್ಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಎ. 30ರಂದು ನಿವೃತ್ತಿ ಹೊಂದಿದ ಶ್ರೀಮತಿ ವಾರಿಜರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೂ. 20 ರಂದು ಶಾಲೆಯಲ್ಲಿ ನಡೆಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸ್ಥಳದಾನಿ ಜಯರಾಮ ರೈ ಜಾಲ್ಸೂರು, ಸೋಣoಗೇರಿ ಕ್ಲಸ್ಟರ್ ಸಿ.ಆರ್.ಪಿ ಶ್ರೀಮತಿ ಅನುರಾಧ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ತಿಮ್ಮಯ್ಯ, ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಶೀಲಾವತಿ ಎಸ್, ಶ್ರೀಮತಿ ವಿಜಯ ಕಾಳಮ್ಮನೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಬು ಕದಿಕಡ್ಕ, ಶಾಲೆಯ ಹಿರಿಯ ವಿದ್ಯಾರ್ಥಿ ಯಶ್ವಿತ್ ಕಾಳಮ್ಮನೆ, ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಅನುಷಾ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಎಸ್ ಡಿ ಎಂ ಸಿ, ಶಾಲಾ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳಿಂದ ಮತ್ತು ಹಿರಿಯ ವಿದ್ಯಾರ್ಥಿ ಸಂಘದಿಂದ ನಿವೃತ್ತ ಮುಖ್ಯ ಶಿಕ್ಷಕಿಯನ್ನು ಗೌರವಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕಿ ವಾರಿಜಾ ಅವರು ತನ್ನ ತಂದೆ ತಾಯಿಯ ಹೆಸರಿನಲ್ಲಿ ದತ್ತ ನಿಧಿಗೆ ರೂ 10,000ವನ್ನು ಹಾಗೂ ಕಬ್ಬಿಣದ ಕಪಾಟನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಶಾಲೆಯ ಎಲ್ಲಾ ಮಕ್ಕಳಿಗೆ ಟಿಫಿನ್ ಬಾಕ್ಸ್ ಕೂಡ ಕೊಡುಗೆಯಾಗಿ ನೀಡಿದರು.
ಪೋಷಕರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಅನುಷಾ ಸ್ವಾಗತಿಸಿ, ಶಾಲೆಯ ಹಿರಿಯ ಶಿಕ್ಷಕಿ ದೇವಕಿ ಎಂ. ವಂದಿಸಿದರು. ಶಿಕ್ಷಕ ಸುಪ್ರೀತ್ ಮತ್ತು ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕರು ಸಹಕರಿಸಿದರು.