ರೆಪ್ಕೋ ಬ್ಯಾಂಕ್ ವತಿಯಿಂದ ಫಲಾನುಭವಿಗಳಿಗೆ ಉಚಿತ ಟೈಲರಿಂಗ್ ಮೆಷಿನ್ ವಿತರಣೆ

0

ಸುಳ್ಯ ರೆಪ್ಕೋ ಬ್ಯಾಂಕ್ ವತಿಯಿಂದ ತಮಿಳು ವಿಧವೆಯರಿಗೆ ಟೈಲರಿಂಗ್ ಮೆಷಿನ್ ವಿತರಣಾ ಕಾರ್ಯಕ್ರಮವು ಜೂ.18 ರಂದು ಸುಳ್ಯ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ರೆಪ್ಕೋ ಬ್ಯಾಂಕ್ ಅಧ್ಯಕ್ಷ ಇ.ಸಂತಾನಮ್ ಅಧ್ಯಕ್ಷತೆ ವಹಿಸಿದ್ದರು.


ರೆಪ್ಕೋ ಹೋಂ ಫೈನಾನ್ಸ್ ಅಧ್ಯಕ್ಷ ತಂಗರಾಜು ಮುಖ್ಯ ಅತಿಥಿಗಳಾಗಿದ್ದರು.
ಅಧ್ಯಕ್ಷರನ್ನು ಹಾಗೂ ಫೈನಾನ್ಸ್ ಅಧ್ಯಕ್ಷರನ್ನು ಡೆಲಿಗೇಟ್ ಸದಸ್ಯರು ಹಾಗೂ ಕಾರ್ಮಿಕ ಮುಖಂಡರು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಿದರು.
ಬಳಿಕ ಡೆಲಿಗೇಟ್ ಸದಸ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು.
62 ಮಂದಿ ಪುನರ್ವಸತಿದಾರ ವಿಧವೆಯರಿಗೆ ಟೈಲರಿಂಗ್ ಮೆಷಿನ್ ವಿತರಣೆ ಮಾಡಲಾಯಿತು.


ರೆಪ್ಕೋ ಬ್ಯಾಂಕಿನ ಡೆಲಿಗೇಟ್ ಸದಸ್ಯರು,ಮಾಜಿ ಸದಸ್ಯರು,ಕಾರ್ಮಿಕ ಮುಖಂಡರು, ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ರೆಪ್ಕೋ ಬ್ಯಾಂಕ್ ಶಾಖಾಧಿಕಾರಿ ಕಳೈರಸನ್ ಸ್ವಾಗತಿಸಿ, ಶಿವಕುಮಾರ್ ಕೂಟೇಲು ವಂದಿಸಿದರು.