ಹಿರಿಯ ನಿವೃತ್ತ ಗುರುಗಳಿಗೆ, ಸ್ನೇಹಿತರಿಗೆ ಗೌರವಾರ್ಪಣೆ
ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ , ಸುಳ್ಯದಲ್ಲೂ ಎಂಟು ವರ್ಷ ಕಾಲ ಸೇವೆ ಸಲ್ಲಿಸಿ ಎ.ಎಸ್.ಐ ಆಗಿ ಭಡ್ತಿ ಪಡೆದು ಇತ್ತೀಚೆಗೆ ಮಂಗಳೂರಿನಲ್ಲಿ ನಿವೃತ್ತಿ ಹೊಂದಿದ ಪದ್ಮನಾಭ ಗೌಡ ಮಡ್ಯಲಮಜಲುರವರು ನಿವೃತ್ತಿ ಪ್ರಯುಕ್ತ ಅವರ ಮನೆಯಲ್ಲಿ ಸ್ನೇಹಕೂಟ ಕಾರ್ಯಕ್ರಮ ಹಾಗೂ ಹಿರಿಯ ನಿವೃತ್ತ ಗುರುಗಳಿಗೆ, ಸ್ನೇಹಿತರಿಗೆ ಗೌರವಾರ್ಪಣೆ ಕಾರ್ಯಕ್ರಮ ಏರ್ಪಡಿಸಿದರು.
ನಿವೃತ್ತ ಮುಖ್ಯ ಶಿಕ್ಷಕ ಐ. ರುದ್ರಯ್ಯ, ನಿವೃತ್ತ ಶಿಕ್ಷಕರುಗಳಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ರೇಗಪ್ಪ ಗೌಡ ಸುಬ್ರಹ್ಮಣ್ಯ, ಶೀನಪ್ಪ ಮಾಸ್ತರ್, ಸದಾಶಿವ ರೈ, ದುಗ್ಗಪ್ಪ ಗೌಡ ಕಾಪಿಲ, ನೀರಾವರಿ ಇಲಾಖೆಯ ನಿವೃತ್ತ ಉದ್ಯೋಗಿ ಪೂರ್ಣಾತ್ಮರಾಮ್ ಈಶ್ವರಮಂಗಲ, ವಿದ್ವಾನ್ ಕಿರಣ್ ಕುಮಾರ್ ಪಡುಪಣಂಬೂರು, ಈಜು ಪಟು ನಾಗರಾಜ್ ಖಾರ್ವಿ, ರೇಷ್ಮೆ ಇಲಾಖೆಯ ನಿವೃತ್ತ ಉದ್ಯೋಗಿ ಬಿ.ಕೆ.ಕೃಷ್ಣಪ್ಪ ನಾಯ್ಕ್ ಈಶ್ವರಮಂಗಲರವರನ್ನು ಪದ್ಮನಾಭ ಗೌಡ ಮಡ್ಯಲಮಜಲು ಮತ್ತು ಪುಷ್ಪಾವತಿ ದಂಪತಿರವರು ಸನ್ಮಾನಿಸಿದರು.
ಎಎಸ್‌ಐ ಜಯಕರ ಗೌಡ, ಪಿಎಸ್‌ಐ ಆನಂದ ಗೌಡ, ಉಪತಹಶೀಲ್ದಾರ್ ರಾಮಣ್ಣ ನಾಯ್ಕ, ಬಾಲಕೃಷ್ಣ ಗೌಡ ಉಳಯ, ಎಎಸ್‌ಐ ಬಾಲಚಂದ್ರ, ಶಿವಪ್ಪ ಗೌಡ ಚೆಂಡೆಮೂಲೆ, ಶಿಕ್ಷಕಿ ಜಯಂತಿ, ಎಸ್‌ಪಿ ಕಚೇರಿಯ ಎಎಒ ರವಿಚಂದ್ರ, ನಿವೃತ್ತ ಸೇನಾನಿ ಸತೀಶ, ವಾಸುದೇವ ಗೌಡ, ಕುಶಾಲಪ್ಪ ಗೌಡ, ತಿಮ್ಮಪ್ಪ ಗೌಡ, ರಾಧಾಕೃಷ್ಣ ರೈ ಡಿ.ಪಿ., ಎಎಸ್‌ಐ ಚಂದ್ರಶೇಖರ, ನಿವೃತ್ತ ಎಎಸ್‌ಐ ಸುರೇಶ ರೈ, ಎಎಸ್‌ಐ ರವೀಂದ್ರನಾಥ ರೈರವರನ್ನು ಹೂ ನೀಡಿ ಸ್ವಾಗತಿಸಲಾಯಿತು.
ಸಮರ್ಥ ಸಾಂಸ್ಕೃತಿಕ ಕಲಾತಂಡದ ತೇಜಸ್ವಿನಿ ನವೀನ್ ಕುಕ್ಕುಡೇಲು ಎಸ್ಟೇಟ್‌ರವರನ್ನು ಗೌರವಿಸಲಾಯಿತು.
ಮಡ್ಯಲಮಜಲು ಕುಟುಂಬದ ಪರವಾಗಿ ಪದ್ಮನಾಭ ಗೌಡ ಮಡ್ಯಲಮಜಲು ಮತ್ತು ಪುಷ್ಪಾವತಿ ದಂಪತಿರವರನ್ನು ಸನ್ಮಾನಿಸಲಾಯಿತು. ನಾಗಪ್ಪ ಗೌಡ ಬೊಮ್ಮೆಟ್ಟಿ, ವಿದ್ವಾನ್ ಕಿರಣ್ ಕುಮಾರ್ ಪಡುಪಣಂಬೂರು, ಬಿ.ಕೆ.ಕೃಷ್ಣಪ್ಪ ನಾಯ್ಕ್‌ರವರು ಅನಿಸಿಕೆ ತಿಳಿಸಿದರು. ಪೂರ್ಣಾತ್ಮರಾಮ್ ಈಶ್ವರಮಂಗಲ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶೀನಪ್ಪ ಮಾಸ್ತರ್ ವಂದಿಸಿದರು. ಕೃಪಾ ನಾಗರಾಜ್ ಕುಂದಾಪುರ ಮತ್ತು ತೇಜಸ್ವಿನಿ ನವೀನ್ ಕುಕ್ಕುಡೇಲು ಕಾರ್ಯಕ್ರಮ ನಿರೂಪಿಸಿದರು.
ಸಮರ್ಥ ಸಾಂಸ್ಕೃತಿಕ ಕಲಾತಂಡದ ವಿದ್ಯಾರ್ಥಿಗಳಿಂದ ಆರಕ್ಷಕ ವಿಷಯಾಧಾರಿತ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಪದ್ಮನಾಭ ಗೌಡ ಮಡ್ಯಲಮಜಲುರವರ ಪುತ್ರ ಅಭಿಷೇಕ್, ಪುತ್ರಿ ಅನುಜ್ಞಾ ಹಾಗೂ ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.