ಬಾಳಿಲದಲ್ಲಿ ಸ್ಟ್ಯಾಂಡರ್ಡ್ ಎಣ್ಣೆ ಮಿಲ್ ಶುಭಾರಂಭ

0

ಇಲ್ಲಿ ದೊರೆಯಲಿದೆ ಗಾಣದಿಂದ ತಯಾರಿಸಲ್ಪಡುವ ಶುದ್ದ ಎಣ್ಣೆ

ಬಾಳಿಲ ಗ್ರಾ.ಪಂ. ನ ಹತ್ತಿರದ ಕಟ್ಟಡದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಮರದ ಗಾಣದಿಂದ ತಯಾರಿಸಲ್ಪಡುವ ಸ್ಟ್ಯಾಂಡರ್ಡ್ ಎಣ್ಣೆ ಮಿಲ್ ಜು.13 ರಂದು ಶುಭಾರಂಭಗೊಂಡಿತು.

ಬೆಳಗ್ಗಿನ ಜಾವ ಗಣಹವನ, ದುರ್ಗಾ ಪೂಜೆ ವೇದಮೂರ್ತಿ ಶಾಂತಕುಮಾರ್ ಭಟ್ ಕಾಯರ ಇವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಎಣ್ಣೆ ಮಿಲ್ ಮಾಲಕರಾದ ನರಸಿಂಹ ಭಟ್ ಕೆದಿಲ, ಉಡುವೆಕೋಡಿ ರಾಧಾಕೃಷ್ಣ ಭಟ್, ಕೈಂತಜೆ ರಾಮ ಭಟ್, ಮಹೇಶ್ ಕುಮಾರ್ ಚೂಂತಾರು, ಸುಬ್ರಾಯ ಭಾರದ್ವಾಜ್ , ವಿಶ್ವನಾಥ ಕೆದಿಲ, ಸಹೋದ್ಯೋಗಿಗಳು, ಸಾರ್ವಜನಿಕ ಬಂಧುಗಳು ಉಪಸ್ಥಿತರಿದ್ದರು.


ಈ ಸಂಸ್ಥೆಯಲ್ಲಿ
ಇ ಮರದ ಗಾಣದಿಂದ ತೆಗೆದ (Cold Compressed Coconut oil) ಶುದ್ಧ ತೆಂಗಿನೆಣ್ಣೆ, ಎಳ್ಳೆಣ್ಣೆ ದೊರೆಯಲಿದೆ.
ಮೆಣಸು, ಅರಶಿನ, ಗೋಧಿ, ಅಕ್ಕಿ ಹಾಗೂ ಇನ್ನಿತರ ಧವಸ ಧಾನ್ಯಗಳನ್ನು ಹುಡಿ ಮಾಡಿ ಕೊಡಲಾಗುವುದು. ಇಲ್ಲಿ ಕಡ್ಲೆ ಎಣ್ಣೆಯೂ ದೊರೆಯಲಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.