ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆಯವರ ವೃತ್ತಿ ಜೀವನದ ಬೆಳಿಹಬ್ಬ ಸಂಭ್ರಮದ ಸವಿನೆನಪಿಗಾಗಿ ಹುಟ್ಟಿ ಬೆಳೆದ ಮನೆಯಂಗಳದಲ್ಲಿ ವಿದ್ಯಾರ್ಥಿಗಳೊಂದಿಗೆ ಒಂದು ದಿನ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ವಿಶೇಷ ಏನೆಂದರೆ ವಿದ್ಯಾರ್ಥಿಗಳಿಗೆ ವೃತ್ತಿ ಜೀವನಕ್ಕೆ ಬರಬೇಕಾದರೆ ತನ್ನ ಮನೆ ಮತ್ತು ತನ್ನೂರಿನ ಶಾಲೆಯ ವಿದ್ಯೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿದ್ಯಾರ್ಥಿಗಳನ್ನು ಉನ್ನತ ಮಟ್ಟದಲ್ಲಿ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಮನೆಯಂಗಳದಲ್ಲೊಂದು ದಿನ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮ ಉದ್ಘಾಟನೆಯನ್ನು ನಿವೃತ್ತ ಅರಣ್ಯಾಧಿಕಾರಿಗಳಾದ ವಿರಪ್ಪಗೌಡ ದೋಳ ನೆರವೇರಿಸಿದರು.
ನಿವೃತ್ತ ಶಿಕ್ಷಕರಾದ ದಾಮೋದರ ಮಾಸ್ಟರ್,ಚಿದಾನಂದ ಮಾಸ್ಟರ್,ಶಾರದಾ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಜಿ.ಹನುಮಂತಪ್ಪ,ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ,ಪಾರ್ಮೆಡ್ ಕಂಪೆನಿಯ ಶ್ರೀನಿವಾಸ್,ವೆಂಕೋಬರಾವ್ ,ಸಜ್ಜನ ದುಬೈ ಸಮಿತಿಯ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಗೂನಡ್ಕ,ಉದ್ಯಮಿ ಜಾಬೀರ್ ಎಂ ಬಿ, ಮೊದಲಾದವರು ಉಪಸ್ಥಿತರಿದ್ದರು.
ಶಾರದಾ ಅನುದಾನಿತ ಶಾಲೆಯಲ್ಲಿ ಹಾಗೂ ತೆಕ್ಕಿಲ್ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಭವಿತ,ದನ್ಯಶ್ರೀ,ಉಷಲತಾ ರವರನ್ನು ಅರಣ್ಯ ಅಧಿಕಾರಿಗಳಾದ ಚಂದ್ರು ಬಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ನಿರ್ದೇಶಕ ಸಲೀಂ ಪೆರಂಗೋಡಿ,ಮಂಜುನಾಥ್ ಹಿರಿಯೂರು, ಪೈಸಲ್ ಬೀಜದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ದಾಮೋದರ ಮಾಸ್ಟರ್ ಅಭಿನಂದನಾ ಮಾತಗಳನ್ನಾಡಿದರು
ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಮತ್ತು ಇನ್ನಿತರ ಸಾಮಾಗ್ರಿಗಳ ಕೊಡುಗೆ
ಡಾ.ಉಮ್ಮರ್ ಬೀಜದಕಟ್ಟೆ ಯವರು ಪ್ರಾಥಮಿಕ ಶಿಕ್ಷಣ ಪಡೆದ ಬೀಜದಕಟ್ಟೆಯ ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಶಾಲೆ ಸುಮಾರು ಏಪ್ಪತ್ತು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ,ಪುಸ್ತಕ, ಪೆನ್ನು,ಪೆನ್ಸಿಲ್ ಹಾಗೂ ಶಾಲಾಮಕ್ಕಳಿಗೆ ಬೇಕಾದ ಉಪಕರಣಗಳು ವಿತರಿಸಲಾಯಿತು.
ಇದನ್ನು ಶಾಲಾ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಕಲ್ಲಗದ್ದೆ ಹಸ್ತಾಂತರಿಸಿದರು.