ಕೂರತ್ ತಂಙಳ್ ರ ಮಾರ್ಗದರ್ಶನ ನಮಗೆ ಮಾದರಿ: ಸಯ್ಯದ್ ಮಸೂದ್ ಅಲ್ ಅಝ್ಹರಿ
ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಇದರ ವತಿಯಿಂದ ಜಟ್ಟಿಪಳ್ಳ ಮಸೀದಿಯಲ್ಲಿ
ಅಸ್ಸೆಯ್ಯದ್ ಯು ಎಸ್ ಕುಂಞಿ ಕೋಯ ತಂಙಳ್ ಸಅದಿ ಸುಳ್ಯ ಇವರ ನೇತೃತ್ವದಲ್ಲಿ ಜಲಾಲಿಯ್ಯಾ ರಾತೀಬ್ ಹಾಗೂ ಇತ್ತೀಚೆಗೆ ನಿಧನರಾದ ಖುರತುಸ್ಸಾದಾತ್ ಸಯ್ಯದ್ ಪಝಲ್ ಕೊಯಮ್ಮ ತಂಙಳ್ ಕೂರತ್ ರವರ ಅನುಸ್ಮರಣೆ ಮತ್ತು ತಹಲೀಲ್ ಕಾರ್ಯಕ್ರಮ ಜು.11 ರಂದು ನಡೆಯಿತು.
ಅನುಸ್ಮರಣೆ ಮತ್ತು ತಹಲೀಲ್ ಕಾರ್ಯಕ್ರಮಕ್ಕೆ ಕೂರತ್ ತಂಙಳ್ ರವರ ಸುಪುತ್ರ ಅಸ್ಸಯ್ಯದ್ ಅಬ್ದುಲ್ ರಹಮಾನ್ ಮಸೂದ್ ಅಲ್ ಅಝರಿ ಅಲ್ ಮುಈನಿತಂಙಳ್ ಆಗಮಿಸಿ ಮಾತನಾಡಿ ನಮ್ಮ ತಂದೆಯವರಾದ ಸಯ್ಯದ್ ಕೂರತ್ ತಂಙಳರನ್ನು ಪ್ರೀತಿಸುತ್ತಿದ್ದ ಹಲವಾರು ಮುಹಿಬ್ಬಿಙಳ್ ಇದ್ದಾರೆ ತಂದೆಯವರು ಸಮಾಜದ ಎಲ್ಲರೊಂದಿಗೆ ಸರಳತೆ ಮತ್ತು ವಿನಯತೆಯಿಂದ ಬೆರೆತು ಸಮಾಜದಲ್ಲಿ ಎಷ್ಷೋ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವಲ್ಲಿ ಸಂಪೂರ್ಣ ತೊಡಗಿಸಿ ಹಲವಾರು ಶಿಕ್ಷಣ ಸಂಸ್ಥೆಗಳ ಮುಖ್ಯ ಪೊಷಕರಾಗಿದ್ದು ಸಮಾಜದ ಏಳಿಗೆಗೆ ಮತ್ತು ಯಶಸ್ವಿಗಾಗಿ ದುಡಿದವರು.
ಕೂರತ್ ತಂಙಳ್ ರವರು ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದರು
ವಿದ್ಯಾಭ್ಯಾಸ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಿದ್ದು ಬ್ರಹತ್ ವಿದ್ಯಾ ಸಮಚ್ಚಯದ ಯೋಜನೆಯೊಂದು ರೂಪಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನದ ಮಧ್ಯೆ ಅವರು ಕೊನೆಯುಸಿರೆಳದರು.
ಆಧ್ಯಾತ್ಮಿಕತೆ ಅವರ ಜೀವನದ ಯಶಸ್ವಿನ ಗುಟ್ಟು ಆಮೂಲಕ ಸರ್ವ ಧರ್ಮದವರಿಗೂ ಅವರು ನಿಕಟರಾದರು.ಅವರು ಬಾಕಿಯಿರಿಸಿದ ವಿದ್ಯಾಭ್ಯಾಸ ಹಾಗೂ ಸಮಾಜ ಸೇವಾ ಚಟುವಟಿಕೆಗಳಲ್ಲಿ ತಮ್ಮೆಲ್ಲರ ಸಹಕಾರವಿರಲಿ ಎಂದು ಅವರ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಮೊಗರ್ಪಣೆ ಜುಮ್ಮಾ ಮಸೀದಿ ಖತೀಬರಾದ ಮಹಮ್ಮದ್ ಆಲಿ ಸಖಾಫಿ ಉದ್ಘಾಟಿಸಿದರು.
ಅನುಸ್ಮರಣೆ ಪ್ರಭಾಷಣ ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಮಾಡಿದರು.
ಜಲಾಲೀಯ್ಯ ರಾತೀಬ್ ನ್ನು ಜಟ್ಟಿಪಳ್ಳ ಮಸೀದಿ ಇಮಾಮ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮತ್ತು ಸಿರಾಜುದ್ದೀನ್ ಸಹದಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಸಿಎಂಎಸ್,ಮಾಜಿ ಅಧ್ಯಕ್ಷ ಹಾಜಿ ಮುಸ್ತಫಾ ಕೆ.ಎಂ,ಅನ್ಸಾರಿಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಹಯಾತುಲ್ ಇಸ್ಲಾಂ ಕಮಿಟಿ ಗೌರವಧ್ಯಕ್ಷ ಅಬೂಭಕ್ಕರ್ ಕೆ.ಎ, ಅಧ್ಯಕ್ಷ ಬಶೀರ್ ಬಾಳಮಕ್ಕಿ,ಮಾಜಿ ಅಧ್ಯಕ್ಷರಾದ ಎನ್ ಎ ಅಬ್ದುಲ್ಲಾ ಹಾಜಿ ಎಸ್ಎಎಸ್ ಮಹಮ್ಮದ್, ಹಾಜಿ ಮಹಮ್ಮದ್ ಬಿ,ಎಂ,ರಶೀದ್ ಜಟ್ಟಿಪಳ್ಳ, ಮೂಸಾ.ಬಶೀರ್ ಕ್ವಾಲಿಟಿ,ಮೊದಲಾದವರು ಉಪಸ್ಥಿತರಿದ್ದರು.
ಜಲಾಲೀಯ್ಯ ಉಸ್ತುವಾರಿ ಗಳಾದ ತಾಜುದ್ದೀನ್ ಎಂ ಎಸ್,ಶರೀಫ್ ಜಟ್ಟಿಪಳ್ಳ, ಶಿಹಾಬ್ ಷಾ,ಪ್ರಧಾನ ಕಾರ್ಯದರ್ಶಿ ಪೈಸಲ್ (ಪೈಚು)ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮೊದಲಾದವರು ಸಹಕರಿಸಿದರು.
ಕಾರ್ಯಕ್ರಮದಲ್ಲಿ ತಹಲೀಲ್ ಮತ್ತು ಸಾಮೂಹಿಕ ದುವಾ ಮಜ್ಲಿಸ್ ನಡೆಯಿತು.
ಕೊನೆಯಲ್ಲಿ ಸಾರ್ವಜನಿಕ ಅನ್ಮಸಂತರ್ಪಣೆ ಮಾಡಲಾಯಿತು.