ಓಡಬಾಯಿ : ಹೆದ್ದಾರಿ ಬದಿಯ ಚರಂಡಿ ತುಂಬಿ ಮನೆಯೊಳಗೆ ನುಗ್ಗಿದ ಮಳೆ ನೀರು

0

ಸಂಪೂರ್ಣ ಒದ್ದೆಯಾದ ಮನೆಯ ಗೃಹೋಪಯೋಗಿ ವಸ್ತುಗಳು

ಓಡಬಾಯಿ ಹೆದ್ದಾರಿ ಬಳಿ ನದಿತೀರ ಹೋಟೆಲ್ ಸಮೀಪ ರಸ್ತೆ ಬದಿಯ ಚರಂಡಿಯಲ್ಲಿ ಮಳೆ ನೀರು ತುಂಬಿ ನೀರು ಹರಿದು ಬಂದು ಮುಂಭಾಗದಲ್ಲಿರುವ ಮನೆಯೊಳಗೆ ನುಗ್ಗಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಒದ್ದೆಯಾದ ಘಟನೆ ಜು ೧೮ ರಂದು ಸಂಭವಿಸಿದೆ.

ಬಾರಿ ಮಳೆಗೆ ರಸ್ತೆಯ ಪಕ್ಕದ ಗುಡ್ಡೆ ಯಿಂದ ಬಂದ ನೀರು ಚರಂಡಿಯಲ್ಲಿ ಹೂಳು ತುಂಬಿದ ಪರಿಣಾಮ ರಸ್ತೆಯ ಮತ್ತೊಂದು ಬದಿಯಲ್ಲಿರುವ ಹೊಟೆಲ್ ನದಿತೀರ ಮಾಲಕರ ಮನೆಯೊಳಗೆ ನುಗ್ಗಿದ್ದು ನೋಡು ನೋಡುತ್ತಿದ್ದಂತೆ ಸಂಪೂರ್ಣ ಕೋಣೆಗಳನ್ನು ಆವರಿಸಿದೆ.


ಬಳಿಕ ಮನೆಯವರು ನೀರು ಹೋಗಲು ಹೊರ ಭಾಗದಲ್ಲಿ ಕಣಿ ವ್ಯವಸ್ಥೆ ಮಾಡಿ ನಿಯಂತ್ರಣಕ್ಕೆ ತಂದಿದ್ದು ಮನೆಯ ಒಳ ಭಾಗದಲ್ಲಿ ಇದ್ದ ನೀರನ್ನು ಹರಸಾಹಸ ಪಟ್ಟು ಹೊರಹಾಕಿದ್ದಾರೆ.

ಅಷ್ಟೊತ್ತಿಗಾಗಲೆ ಮನೆಯ ಪರಿಕರಗಳು ಪೂರ್ಣ ಒದ್ದೆಯಾಗಿದ್ದವು ಎಂದು ಮನೆಯವರು ಸುದ್ದಿಗೆ ತಿಳಿಸಿದ್ದಾರೆ.