ಜು.22; ಸುಳ್ಯದಲ್ಲಿ ನಮ್ಮ ಮಾರ್ಟ್ ನೂತನ ಸೂಪರ್ ಮಾರ್ಕೆಟ್ & ಸ್ಟ್ರೀಟ್ ಸ್ಟೋರೀಸ್ ಕೆಫೆ ಶುಭಾರಂಭ

0

ಸುಳ್ಯದ ಅಂಬಟೆಡ್ಕದ ಕೆವಿಜಿ ಆಯುರ್ವೇದ ಕಾಲೇಜು ಎದುರಿನ ಅಡ್ಕಾರ್ ಆರ್ಕೆಡ್ ನಲ್ಲಿ ಸುಸಜ್ಜಿತ ನಮ್ಮ ಮಾರ್ಟ್ ನೂತನ ಸೂಪರ್ ಮಾರ್ಕೆಟ್ & ಸ್ಟ್ರೀಟ್ ಸ್ಟೋರೀಸ್ ಕೆಫೆ ಜು.22 ರಂದು ಪೂ.10.30ಕ್ಕೆ ಶುಭಾರಂಭಗೊಳ್ಳಲಿದೆ.
ನೂತನ ಮಳಿಗೆಯನ್ನು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ನೆರವೇರಿಸಲಾಗಿದೆ.
ಗೌರವ ಅತಿಥಿಗಳಾಗಿ ಸುಳ್ಯದ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ಭಾ.ಜ.ಪಾ.ಸುಳ್ಯ ಮಂಡಲ ಸಮಿತಿ ಅಧ್ಯಕ್ಷ
ವೆಂಕಟ್ ವಳಲಂಬೆ, ಜನತಾದಳ
ರಾಜ್ಯ ಉಪಾಧ್ಯಕ್ಷ
ಎಂ. ಬಿ. ಸದಾಶಿವ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಸುಳ್ಯ ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ
ಹರೀಶ್ ಕಂಜಿಪಿಲಿ, ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್, ಅಡ್ಕಾರ್ ಆರ್ಕೆಡ್ ನ ಮಾಲಕರಾದ ದಿನೇಶ್ ಅಡ್ಕಾರ್, ಯಾದವ ಸಭಾ ಸಲಹಾ ಮಂಡಳಿ ಮಂಗಳೂರು ಇದರ ಅಧ್ಯಕ್ಷ
ಸುಧಾಮ ಆಲೆಟ್ಟಿ,
ಮಣಿರಾಮ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಬೆಂಗಳೂರು ಇದರ
ಜನರಲ್ ಮ್ಯಾನೇಜರ್ ನಿತ್ಯಾನಂದ ಹಾಸ್ಪಾರೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ, ಮುಂದೆಯೂ ಸಹಕಾರ ನೀಡಬೇಕೆಂದು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ
ಕರುಣಾಕರ ಹಾಸ್ಪಾರೆ,ನ್ಯಾಯವಾದಿ ಕಮಲಾಕ್ಷಿ ಮೋಹನ್,
ಸುನಿಲ್ ಕೆ.ಜೆ,ಮೋನಿಕಾ ಮೋಹನ್ ವಿನಂತಿಸಿದ್ದಾರೆ.