Home ಪ್ರಚಲಿತ ಸುದ್ದಿ ನೆಟ್ಟಾರಿನಲ್ಲಿ ಮರ ಬಿದ್ದು ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

ನೆಟ್ಟಾರಿನಲ್ಲಿ ಮರ ಬಿದ್ದು ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು

0

ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತ : ನೆಟ್ಟಾರು ಸುತ್ತಮುತ್ತ ವಿದ್ಯುತ್ ಕಡಿತ

ನೆಟ್ಟಾರು – ಮಣಿಕ್ಕಾರ ರಸ್ತೆಯಲ್ಲಿ ವಿದ್ಯುತ್ ಲೈನಿಗೆ ಮರಬಿದ್ದು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತು.
11 ಕೆ.ವಿ.ಫೀಡರ್ ನ 5 ಕಂಬಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಬೆಳ್ಳಾರೆ ನೆಟ್ಟಾರು ಕಡೆಗಳಲ್ಲಿ ವಿದ್ಯುತ್ ಕಡಿತಗೊಂಡಿದೆ.


ಬೆಳ್ಳಾರೆ ಮೆಸ್ಕಾಂ ಜೆ.ಇ.ಪ್ರಸಾದ್ ಹಾಗೂ ಲೈನ್ ಮೆನ್ ಗಳು ಕೂಡಲೆ ಸ್ಥಳಕ್ಕೆ ಬಂದು ರಸ್ತೆಯಿಂದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರೆಂದು ತಿಳಿದು ಬಂದಿದೆ.

NO COMMENTS

error: Content is protected !!
Breaking