ಸುಳ್ಯದ ಅಂಬಟೆಡ್ಕದಲ್ಲಿ ನಮ್ಮ ಮಾರ್ಟ್ ಸೂಪರ್ ಮಾರ್ಕೆಟ್ ಹಾಗೂ ಸ್ಟ್ರೀಟ್ ಸ್ಟೋರಿ ಕೆಫೆ ಶುಭಾರಂಭ

0

ಸುಳ್ಯದ ಅಂಬಟೆಡ್ಕದ ಅಡ್ಕಾರ್ ಆರ್ಕೇಡ್ ನಲ್ಲಿ ಸುನಿಲ್ ಕೆ.ಜಿ ಮತ್ತು ಶ್ರೀಮತಿ ಮೋನಿಕಾ ದಂಪತಿ ಮಾಲೀಕತ್ವದ ನಮ್ಮ ಮಾರ್ಟ್ ಸೂಪರ್ ‌ಮಾರ್ಕೆಟ್ ಮತ್ತು ಸ್ಟ್ರೀಟ್ ಸ್ಟೋರಿ ಕೆಫೆಯು
ಜು.22 ರಂದು ಶುಭಾರಂಭಗೊಂಡಿತು.

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷಡಾ.ಕೆ.ವಿ.ಚಿದಾನಂದ ರವರು ಸೂಪರ್ ಮಾರ್ಕೆಟ್ ನ್ನು ಉದ್ಘಾಟಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಕೆಫೆಯನ್ನು ಶುಭಾರಂಭಗೊಳಿಸಿದರು.


ಉದ್ಯಮಿ ಲಯನ್ ಎಂ.ಬಿ.ಸದಾಶಿವ, ನ.ಪಂ.ಸದಸ್ಯೆ ಕಿಶೋರಿ ಶೇಟ್,ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಮಡಪ್ಪಾಡಿ ಸೊಸೈಟಿ ಅಧ್ಯಕ್ಷ ಪಿ.ಸಿ.ಜಯರಾಮ, ಆರ್ಕೇಡ್ ಮಾಲಕ ದಿನೇಶ್ ಅಡ್ಕಾರ್, ಯಾದವ ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಸುಧಾಮ ಆಲೆಟ್ಟಿ, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ
ವೆಂಕಟ್ ವಳಲಂಬೆ,
ಉದ್ಯಮಿ ನಿತ್ಯಾನಂದ ಹಾಸ್ಪಾರೆ, ಮಾಲಕ ಸುನಿಲ್ ಕೆ.ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲೆಟ್ಟಿ ಸೊಸೈಟಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಬಂಧು ಮಿತ್ರರು ಆಗಮಿಸಿ ಶುಭ ಹಾರೈಸಿದರು.