ಬಿದ್ದು ಸಿಕ್ಕಿದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ಕಲಾಶಿಕ್ಷಕ ಪದ್ಮನಾಭ ಕೊಯ್ನಾಡು

0
ಜು.16 ರಂದು  ಮಡಿಕೇರಿ-ಸುಳ್ಯ ಮುಖ್ಯ ರಸ್ತೆಗೆ ತಾಗಿಕೊಂಡು ಇರುವ ಕೊಡಗು ಸಂಪಾಜೆ ಗ್ರಾ. ಪಂ. ರಸ್ತೆಯಲ್ಲಿ  ಪದ್ಮನಾಭ ಕೊಯ್ನಾಡು ಎಂಬವರಿಗೆ ಹ್ಯಾಂಡ್ ಪರ್ಸ್   ಬಿದ್ದು ಸಿಕ್ಕಿದ್ದು ಅದನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ್ದಾರೆ .


ಬಿದ್ದು ಸಿಕ್ಕಿದ ಪರ್ಸ್ ನಲ್ಲಿ ಭವಾನಿ ಎಮ್. ಎಂಬ ಹೆಸರಿನ ಮಹಿಳೆಯ ಆಧಾರ್ ಕಾರ್ಡ್ ಅಷ್ಟೇ ಅಲ್ಲದೇ ರೂಪಾಯಿ 3,610/ಮತ್ತು ರೂಪಾಯಿ 7ರಷ್ಟು ನಾಣ್ಯಗಳು ಇದ್ದವು. ಈ ಮಾಹಿತಿಯನ್ನು ಪದ್ಮನಾಭ ಅವರು ಸ್ಥಳೀಯ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ರವಾನಿಸಿದ ಮೇರೆಗೆ ಪರ್ಸ್ ಕಳೆದುಕೊಂಡ ಮಹಿಳೆ ಶ್ರೀಮತಿ ಭವಾನಿ ಎಮ್. ಎಸ್. ಭೇಟಿ ನೀಡಿ ಪರ್ಸ್ ನ ಬಗ್ಗೆ ನಿಖರವಾದ ಮಾಹಿತಿ ಹೇಳಿದರು. ಅದರಂತೆ ಮರುದಿನ ಜು. 18 ರಂದು ಪರ್ಸ್ ನ್ನು ಶ್ರೀ ಮಹಾಗಣಪತಿ ದೇವಸ್ಥಾನ ಕೊಯ್ನಾಡು ಇಲ್ಲಿಗೆ ಮಹಿಳೆ ಮತ್ತು ಅವರ ಸಂಬಂಧಿಕರನ್ನು ಬರ ಹೇಳಿ, ದೇವಸ್ಥಾನದ ಕಾರ್ಯದರ್ಶಿ, ಅರ್ಚಕರು, ಊರ ಮಹನೀಯರ ಸಮ್ಮುಖದಲ್ಲಿ ಪರ್ಸ್ ಅದರಲ್ಲಿದ್ದ ಹಣ ಮತ್ತು ಆಧಾರ್ ಕಾರ್ಡ್ ನ್ನು ಹಸ್ತಾಂತರಿಸಲಾಯಿತು.ಪದ್ಮನಾಭ ಕೊಯ್ನಾಡುರವರು ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಾಶಿಕ್ಷಕ ರಾಗಿರುತ್ತಾರೆ.