ಮೆಸ್ಕಾಂ ವತಿಯಿಂದ ಅಪಾಯಕಾರಿ ಮರ ತೆರವು ಹಿನ್ನಲೆಯಲ್ಲಿ ಇಂದು ವಿದ್ಯುತ್ ವ್ಯತ್ಯಯ

0

ಮಳೆ ಗಾಳಿ ಹಿನ್ನಲೆಯಲ್ಲಿ ಅಲ್ಲಲ್ಲಿ ಮರಗಳು ಬೀಳುತ್ತಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಮೆಸ್ಕಾಂ ವತಿಯಿಂದ ಅಪಾಯಕಾರಿ ಮರಗಳ ತೆರವು ಕಾರ್ಯ ಇಂದು ನಡೆಯುತ್ತಿದೆ.


ಈ ಹಿನ್ನೆಲೆಯಲ್ಲಿ ಇಂದು ಸುಳ್ಯದ ಬಹುತೇಕ ಕಡೆಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯೆಯ ಉಂಟಾಗಲಿದೆ ಎಂದು ತಿಳಿದುಬಂದಿದೆ.


ಮೆಸ್ಕಾಂ ಸುಳ್ಯ ಉಪ ವಿಭಾಗ ವ್ಯಾಪ್ತಿಯ 33/11ಕೆ ವಿ ಫೀಡರ್ಗಳಾದ ಸುಳ್ಯ.1- ಕೇರ್ಪಳ,ಸುಳ್ಯ 2 ಶ್ರೀರಾಮ್ ಪೇಟೆ ಜಬಳೆ ಡಿಪೋ, ತೊಡಿಕಾನ, ಕೋಲ್ಚಾರ್, ದೇವರಗುಂಡ, ಅಜ್ಜಾವರ, ಉಬರಡ್ಕ, ಕಲ್ಲುಗುಂಡಿ ಮಂಡೆಕೋಲು ಫೀಡರ್ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.