ಶಿಕ್ಷಕರಿಲ್ಲದ ಸಂದರ್ಭದಲ್ಲಿ ಶಾಲೆಯಲ್ಲಿ ತಂದಿಟ್ಟ ಅಕ್ಷರ ದಾಸೋಹ ಆಹಾರ ಸಾಮಾಗ್ರಿ

0

ಅಯ್ಯನಕಟ್ಟೆ ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಅಕ್ಷರ ದಾಸೋಹ ಇಲಾಖೆಯ ಮೂಲಕ ಸರಬರಾಜಾಗುವ ಆಹಾರ ಪದಾರ್ಥಗಳನ್ನು ಶಿಕ್ಷಕರಿಲ್ಲದ ಸಮಯದಲ್ಲಿ ಏಜೆನ್ಸಿಯವರು ತಂದು ಹಾಕಿದ್ದು, ರಾತ್ರಿ ಬೀದಿ ನಾಯಿಗಳು ಪ್ಯಾಕೇಟ್ ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಎಸ್. ಡಿ.ಎಂ.ಸಿ. ಅಧ್ಯಕ್ಷ ಭಾಸ್ಕರ ಪೂಜಾರಿಯವರು ಸುದ್ದಿಗೆ ಮಾಹಿತಿ ನೀಡಿದ್ದು, ಆಹಾರ ಸಾಮಾಗ್ರಿ ಸರಬರಾಜು ಮಾಡುವ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ಶಿಕ್ಷಕರಿಗಾಗಲೀ ಎಸ್. ಡಿ.ಎಂ.ಸಿ.ಯವರಿಗಾಗಲೀ ಯಾವುದೇ ಮಾಹಿತಿ ನೀಡದೆ ಶಾಲೆ ಮುಚ್ಚಿರುವ ಸಂದರ್ಭದಲ್ಲಿ ಜಗಲಿಯಲ್ಲಿ ಸಾಮಾಗ್ರಿಗಳನ್ನು ತಂದು ಹಾಕಿದ್ದಾರೆ. ಇದನ್ನು ಮಕ್ಕಳಿಗೆ ಹೇಗೆ ನೀಡುವುದು ಎಂದು ಪ್ರಶ್ನಿಸಿದ್ದಾರೆ.