ಯೂತ್ ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ಕುತ್ತಮೊಟ್ಟೆ ಹಾಗೂ ಸಹಚರರು ಭಾಗಿ
ಭಾರಿ ಮಳೆಯಿಂದಾಗಿ ಕೇರಳದ ವಯನಾಡಿನಲ್ಲಿ ಭೀಕರ ಭೂ ಕುಸಿತ ಉಂಟಾಗಿರುವ ಪ್ರದೇಶದಲ್ಲಿ ಸುಳ್ಯದ ಯುವಕರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕ್ಕೊಂಡಿದ್ದಾರೆ.
ಸುಳ್ಯ ಯೂತ್ ಕಾಂಗ್ರೆಸ್ ಮುಖಂಡ ಶಾಹುಲ್ ಹಮೀದ್ ರವರ ನೇತೃತ್ವ ದಲ್ಲಿ ಗಾಂಧಿನಗರ ಪರಿಸರದ ಹಮೀದ್ ಚಾಯ್ಸ್, ಪಾರಿಝ್, ಸಿನಾನ್, ಇರ್ಫಾನ್ ಇವರುಗಳು ವಯನಾಡ್ ಮೇಪಾಡಿ ಬಳಿ ಬೆಳಿಗ್ಗಿನಿಂದ ರಕ್ಷಣಾ ಕಾರ್ಯದಲ್ಲಿ ಸ್ಥಳೀಯರೊಂದಿಗೆ ಕೈ ಜೋಡಿಸುತ್ತಿದ್ದಾರೆ.
400 ಕ್ಕೂ ಹೆಚ್ಚು ಮನೆಗಳು ಕಟ್ಟಡಗಳು ದ್ವಂಸ ಗೊಂಡಿದ್ದು ಮಣ್ಣಿನ ಅವಶೇಷಗಳಡಿ ನೂರಾರು ಜನರು ಸಿಲುಕಿ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.
ಈ ವರೆಗೆ ಪರಿಸರ ಪ್ರದೇಶದಿಂದ ನೂರಕ್ಕೂ ಹೆಚ್ಚು ಮೃತ ಶರೀರವನ್ನು ಸ್ಥಳೀಯ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಇಂದು ಮುಂಜಾನೆ ಈ ದುರಂತ ಸಂಭವಿಸಿದೆ. ನಸುಕಿನ ಜಾವ 2 ಗಂಟೆಸುಮಾರಿಗೆ ಮೊದಲ ಭೂ ಕುಸಿತ ಸಂಭವಿಸಿದೆ. ಬಳಿಕ ಬೆಳಗಿನ ಜಾವ 4:10ರ ಸುಮಾರಿಗೆ ಮತ್ತೊಂದು ಭೂ ಕುಸಿತ ಸಂಭವಿಸಿದೆ.
ಇದಾದ ಬಳಿಕ ಮತ್ತೊಂದು ಕಡೆ ಭೂ ಕುಸಿತ ಸಂಭವಿಸಿದೆ. ವಯನಾಡ್ ಜಿಲ್ಲೆಯಲ್ಲಿ ಮೂರು ಕಡೆ ಭೂ ಕುಸಿತ ಸಂಭವಿಸಿದೆ. ಪ್ರವಾಹದಂತೆ ನೀರು ಹರಿದು ಬರುತ್ತಿದ್ದು, ನೀರಿನ ರಭಸಕ್ಕೆ, ಮನೆ, ಅಂಗಡಿಗಳು, ವಾಹನಗಳು ಕೊಚ್ಚಿ ಹೋಗಿವೆ
ಅಗ್ನಿಶಾಮಕ ಸಿಬ್ಬಂದಿ ಹಾಗೂ ಎನ್ ಡಿ ಆರ್ ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ. ಆದರೆ 400 ಕುಟುಂಬಗಳು ಅತಂತ್ರವಾಗಿವೆ.