ಅಪಾಯಕಾರಿ ಎಂದು ಗೊತ್ತಿದ್ದರೂ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ
ಅಪಘಾತಕ್ಕೆ ಕಾರಣವಾಯ್ತು ಈ ಸ್ಥಳ
ಇನ್ನಾದರೂ ಕ್ರಮ ವಹಿಸುವಿರಾ ಅಧಿಕಾರಿಗಳೇ? ಸಾರ್ವಜನಿಕರ ಪ್ರಶ್ನೆ
ಸುಳ್ಯದಿಂದ ಆಲೆಟ್ಟಿಗೆ ಸಂಪರ್ಕಿಸುವ ರಸ್ತೆ ಗುರುಂಪು ಬಳಿ ತಿರುವು ರಸ್ತೆಯಲ್ಲಿ ಮಣ್ಣು ಮತ್ತು ಕೆಂಪು ಕಲ್ಲು, ಜಲ್ಲಿಕಲ್ಲು, ನೀರಿನ ಬ್ರಿಹತ್ ಪೈಪ್ ಮುಂತಾದ ಸಾಮಗ್ರಿಗಳು ರಾಶಿ ಬಿದ್ದಿದ್ದು ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ಒಂದು ವರ್ಷ ಮೊದಲು ಪಕ್ಕದ ಬರೆ ಜರಿದು ಮಣ್ಣು ಪ್ರಸ್ತುತ ವೇಳೆ ಅದು ಗುಡ್ಡೆಯಾಗಿ ಪರಿಣಮಿಸಿದೆ. ಮತ್ತು ಸ್ಥಳೀಯರು ಮನೆಗೆ ತಡೆಗೋಡೆ ನಿರ್ಮಾಣಕ್ಕೆ ಬಳಸಿದ ಕೆಂಪು ಕಲ್ಲು ಹಾಗೂ ಮತ್ತು ಅಲ್ಪ ದೂರದಲ್ಲಿ ಬೇರೊಬ್ಬರ ಜಲ್ಲಿಯ ರಾಶಿ ಇದ್ದರೆ ಮತ್ತೊಂದು ತುದಿಯಲ್ಲಿ ನಗರ ಪಂಚಾಯತ್ ಕುಡಿಯುವ ನೀರಿನ ಯೋಜನೆಗೆ ಅಳವಡಿಸಲು ಇಟ್ಟಿರುವ ಬ್ರಿಹತ್ ಪೈಪ್ ಇದೆಲ್ಲಾ ರಸ್ತೆಯ ತಿರುವಿನ ಬಳಿಯೇ ರಸ್ತೆಗೆ ತಾಗಿಕ್ಕೊಂಡು ಬಿದ್ದಿದೆ.
ಮೊದಲೇ ಈ ರಸ್ತೆಯ ವಿಸ್ತೀರ್ಣ ಕಡಿಮೆ ಇದ್ದು ವಾಹನಗಳು ಒಂದಕ್ಕೊಂದು ಸೈಡ್ ಕೊಡಲು ಸಾಧ್ಯವಿಲ್ಲದ ಸ್ಥಳವಾಗಿದೆ. ವಾಹನ ದಟ್ಟನೆ ಕೂಡ ಹೆಚ್ಚು ಇರುವ ಪ್ರದೇಶ ಬೇರೆ.
ಅಲ್ಲದೆ ಆಲೆಟ್ಟಿ ತಿರುವು ಬಳಿ ಇಂದ ಸ್ವಲ್ಪ ಕೆಳಗೆ ಇತ್ತೀಚಿಗೆ ತೆರವು ಗೊಳಿಸಿದ್ದ ಮರದ ಧಿಮ್ಮಿಗಳು ಕೂಡ ಅಲ್ಲೇ ರಸ್ತೆ ಬದಿಯಲ್ಲಿಯೇ ಬಿದ್ದು ಕೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಸಂಭಂದಪಟ್ಟ ನಗರ ಆಡಳಿತ ಸಂಸ್ಥೆಗೆ ಮಾಹಿತಿ ನೀಡಿದರು ಇದುವರೆಗೂ ಯಾವುದೇ ಸ್ಪಂದನೆ ಸಿಗಲಿಲ್ಲ ಎಂದು ಸ್ಥಳೀಯರ ಮಾತಾಗಿದೆ.
ಒಟ್ಟಿನಲ್ಲಿ ಇದೇ ಪರಿಸದಲ್ಲಿ ಆ 10 ರಂದು ಜೀಪು ಮತ್ತು ಬೈಕ್ ಅಪಘಾತ ನಡೆದು ಬೈಕ್ ಸವಾರ ಗಾಯಗೊಂಡದ್ದು ಮಾತ್ರ ಬಹಳ ಬೇಸರದ ಸಂಗತಿಯಾಗಿದೆ.
ಈ ರೀತಿಯ ಸಮಸ್ಯೆಗಳ ಬಗ್ಗೆ ಸಾರ್ವಜನಿಕರೂ, ಮಾಧ್ಯಮಗಳು ಸಂಬಂಧಪಟ್ಟವರನ್ನು ಎಷ್ಟೇ ಎಚ್ಚರಿಸಿದರೂ ಅನಾಹುತ ನಡೆದ ಬಳಿಕವೇ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಹಾಗಾದರೆ ಮನುಷ್ಯರ ಪ್ರಾಣಕ್ಕೆ ಬೆಲೆಯೇ ಇಲ್ಲವೇ ಎಂದು ಸ್ಥಳೀಯರು ಮತ್ತು ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪ್ರಶ್ನೆ ಮಾಡುತ್ತಿದ್ದಾರೆ.