ಸಂಪಾಜೆ ಗ್ರಾಮದ ಚಟ್ಟೆಕಲ್ಲು, ಬಂಗ್ಲೆಗುಡ್ಡೆ, ನೆಲ್ಲಿಕುಮೇರಿ,ಕಲ್ಲುಗುಂಡಿ ಭಾಗಗಳಲ್ಲಿ ಬೀದಿ ನಾಯಿ ಹಾವಳಿಯಿಂದ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರಸ್ತೆಗಳಲ್ಲಿ ನಡೆದಾಡಲು ಕೂಡ ಕಷ್ಟವಾಗುತ್ತಿದೆ.
ಆರು ತಿಂಗಳ ಮೊದಲು 5 ವರ್ಷದ ಬಾಲಕಿಗೆ ಬೀದಿ ನಾಯಿಗಳು ಗುಂಪಾಗಿ ಆಕ್ರಮಿಸಿ ಕಚ್ಚಿ ಗಂಭೀರ ಗಾಯಗೊಳಿಸಿದ ಉದಾಹರಣೆಯು ಇದೆ.
ಈ ಬಗ್ಗೆ ಸಾರ್ವಜನಿಕರೊಬ್ಬರು ಸಂಪಾಜೆ ಗ್ರಾಮ ಪಂಚಾಯತ್
ಜನಪ್ರತಿನಿಧಿಗಳಲ್ಲಿ ಹೇಳಿದಾಗ
ಅವರಿಗೆ ಹೇಳಿ, ಇವರಿಗೆ ಹೇಳಿ, ಅಂತ ಬೇಜವಾಬ್ದಾರಿಯುತ ಉತ್ತರವನ್ನು ನೀಡಿದ್ದಾರೆ, ಸಕಾರಾತ್ಮಕ ಸ್ಪಂದನೆ ಇಲ್ಲದ ಕಾರಣ ಸಂಪಾಜೆ ಗ್ರಾಮದ 5ನೇ ವಾರ್ಡ್ ನ ಚಟ್ಟೆಕಲ್ಲು
ಭಾಗದ ಕೆಲವು ನಾಗರಿಕರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ಮನವಿಯನ್ನು ನೀಡಿದ್ದಾರೆ,
ಈ ಮನವಿಗೆ ಏಳು ದಿನಗಳ ಒಳಗಾಗಿ ಸಂಬಂಧಪಟ್ಟವರು ಸ್ಪಂದಿಸದೆ ಇದ್ದರೆ, ಸ್ಥಳೀಯ ಮೂಲಭೂತ ಹಕ್ಕುಗಳ ಹಿತರಕ್ಷಣಾ ವೇದಿಕೆಯ ಮೂಲಕ ಸುಳ್ಯ ತಹಶಿಲ್ದಾರರಿಗೆ ದೂರು ನೀಡ ಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.