ಪಂಜ ಸರಕಾರಿ ಆಸ್ಪತ್ರೆ ಬಳಿ ಕೌಂಪಾಂಡ್ ಕುಸಿತ

0

ಅಪಾಯದಲ್ಲಿ ಸಿಲುಕಿದ ಆಸ್ಪತ್ರೆ ಕಟ್ಟಡ


ಕಟ್ಟಡದ ಸಮೀಪದ ವರೆಗೆ ಬಿರುಕು

ಭಾರೀ ಮಳೆಗೆ ಆ.13 ರಂದು ರಾತ್ರಿ
ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಕೌಂಪಾಡು ಕುಸಿದಿದ್ದು ಆಸ್ಪತ್ರೆ ಅಪಾಯದಲ್ಲಿದೆ.

ಕೌಂಪಾಂಡ್ ಬದಿಯಿಂದ ಬಹಳಷ್ಟು ಆಳವಾದ ಜಾಗವಾದುದರಿಂದ ಆಸ್ಪತ್ರೆ ಕಟ್ಟಡ ಅಪಾಯದಲ್ಲಿದೆ. ಕಟ್ಟಡದ ಸಮೀಪದ ವರೆಗೆ ಬಿರುಕು ಬಿಟ್ಟಿದ್ದು ಭಾರೀ ಅಪಾಯದಲ್ಲಿದೆ.

ಈ ಹಿಂದೆ ಕಟ್ಟಡದ ಇನ್ನೊಂದು ಬದಿಯ ಕೌಂಪಾಂಡ್ ಕುಸಿತ ಗೊಂಡಿದ್ದಾಗ ಕಟ್ಟದ ಗೋಡೆಯಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು.