Home ಇತ್ತೀಚಿನ ಸುದ್ದಿಗಳು ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯವ

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯವ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಊರ ಭಾಂದವರೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬಿಜೆಎಂ ಖತೀಬರಾದ ಅಬ್ಬಾಸ್ ಮದನಿರವರ ನೇತೃತ್ವದೊಂದಿಗೆ ಜಮಾಅತ್ ಅಧ್ಯಕ್ಷರು ಇಸ್ಮಾಯಿಲ್ ಪಿ.ಎಸ್ ಹಾಗೂ ಮಾಜಿ ಅಧ್ಯಕ್ಷ ಇಬ್ರಾಹಿಂ ಎ.ಕೆ, ಅಬೂಬಕ್ಕರ್ ಎನ್ ರವರು ಜತೆಗೂಡಿ ಧ್ವಜಾರೋಹಣ ನೆರವೇರಿಸಿದರು. ಮಕ್ಕಳು ಸಾರೇ ಜಹಾಂಸೆ ಅಚ್ಚಾ ಹಾಡನ್ನು ಹಾಡಿದರು. ಮಹಮ್ಮದ್ ಇಶ್ಫಾಕ್ ಸಂವಿಧಾನ ಪೀಠಿಕೆಯನ್ನು ಭೋದಿಸಿದರು. ಮುಹಮ್ಮದ್ ಕೆ.ಎಂ ಮತ್ತು ಅಝೀಝ್ ಕೆ.ಹೆಚ್ ಸಂದೇಶ ಭಾಷಣದೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಸ್ಮರಿಸಿ, ಸಹೋದರತ್ವ ಭಾವನೆಯನ್ನು ಎತ್ತಿ ಹೇಳಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಿದ ದೇಶಭಕ್ತಿಯ ಕುರಿತು ಮದರಸ ವಿಧ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಣೆ ನಡೆಯಿತು. ಮದರಸ ಪ್ರಾಧ್ಯಾಪಕ ಹಸೈನಾರ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರ ಗೀತೆಯ ಮೂಲಕ ಕೊನೆಗೊಳಿಸಲಾಯಿತು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ಮೊಯ್ದೀನ್ ಎ ಬಿ, ಅಬೂಬಕ್ಕರ್ ಅಂಗಡಿ, ಇಸ್ಮಾಯಿಲ್ ಎನ್ ಮತ್ತಿತ್ತರರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking