ಪಂಜ: ಸ್ಕೂಟರ್, ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾದ ಬೈಕ್

0


ನಿಂತಿಕಲ್ಲಿನಲ್ಲಿ ಬೈಕ್ ಗೆ ತಡೆ : ಗಾಯಾಳುಗಳು ಆಸ್ಪತ್ರೆಗೆ

ಪಂಜ ಪೇಟೆಯಲ್ಲಿ ಸ್ಕೂಟರ್ ಮತ್ತು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಬೈಕ್ ನ್ನು ನಿಂತಿಕಲ್ಲಿನಲ್ಲಿ ತಡೆದು ಅವರನ್ನು ಪಂಜಕ್ಕೆ ಕರೆ ತಂದ ಘಟನೆ ಆ.೧೫ ರಂದು ಸಂಜೆ ವರದಿಯಾಗಿದೆ.

ಸ್ಥಳಕ್ಕೆ ಸುಬ್ರಹ್ಮಣ್ಯ ಪೋಲೀಸ್ ರು ಆಗಮಿಸಿದ್ದಾರೆ. ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಸಾಗಿಸಲಾಗಿದೆ. ಪರಾರಿಯಾದ ಬೈಕ್ ಸವಾರ ಅಕ್ಷಯ್ ಎಂಬವರ ಕಾಲಿಗೆ ಗಾಯವಾಗಿದೆ. ವಿಷಯ ತಿಳಿದು ಸ್ಥಳದಲ್ಲಿ ಭಾರೀ ಜನ ಸೇರಿದ್ದರು.