ಉಬರಡ್ಕ: ಸಾರ್ವಜನಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆ

0

ಉಬರಡ್ಕ ಮಿತ್ತೂರಿನ ಶ್ರೀ ನಂದಿನಿ ಮಹಿಳಾ ಮಂಡಲ ಇದರ ವತಿಯಿಂದ 14 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.16 ರಂದು ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಂಗಣದಲ್ಲಿ ನಡೆಯಿತು. ದೇವಾಲಯದ ಅರ್ಚಕ ಮಧ್ವರಾಜ್ ಭಟ್ ಪೂಜೆ ನೆರವೇರಿಸಿದರು. ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದರು. ನಂತರ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು.