ಕೋಲ್ಚಾರು ಶಾಲೆಯಲ್ಲಿ ಭೀಮರಾವ್ ವಾಷ್ಠರ್ ತಂಡದಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ

0

ಕನ್ನಡ ರಾಜ್ಯೋತ್ಸವ – ಸಾಹಿತ್ಯ ಸಂಭ್ರಮ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವಿಚಾರ ವೇದಿಕೆ ವತಿಯಿಂದ ರಾಜ್ಯದಲ್ಲಿ ಮಲೆನಾಡ ಗಾಂಧಿ ದಿ. ಗೋವಿಂದೇಗೌಡ ಸ್ಮರಣಾರ್ಥ ನೀಡುವ ಅತ್ತ್ಯುತ್ತಮ ಶಾಲೆ ಪುರಸ್ಕಾರ ಪಡೆದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಲ್ಚಾರು ಶಾಲೆಯ ಸಭಾಂಗಣದಲ್ಲಿ ಸುಳ್ಯದ ಖ್ಯಾತ ಗಾಯಕ, ಜ್ಯೋತಿಷಿ ಮತ್ತು ಸಾಹಿತಿಗಳಾದ ಎಚ್. ಭೀಮರಾವ್ ವಾಷ್ಠರ್ ಮತ್ತು ತಂಡದ ವತಿಯಿಂದ ವಿಶೇಷ ಗೀತ ಗಾಯನ ಕಾರ್ಯಕ್ರಮ ಜರುಗಿತು. ಗೀತ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಕುರಿತ ಗೀತೆಗಳು, ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆ ಮತ್ತು ಜಾನಪದ ಗೀತೆಗಳ ಗಾಯನ ಕಾರ್ಯಕ್ರಮ ಜರುಗಿತು

ಸುಮಾರು ಮೂರು ಗಂಟೆಗಳ ಕಾಲಾವಧಿಯ ಗೀತ ಗಾಯನ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಎಚ್. ಭೀಮರಾವ್ ವಾಷ್ಠರ್, ಹರಿಪ್ರಸಾದ್ ಪರಪ್ಪೆ ಮತ್ತು ಸುನೀಶ್ ಕಾಸರಗೋಡು ನಡೆಸಿಕೊಟ್ಟರು. ಮಕ್ಕಳು, ಶಿಕ್ಷಕರು ಮತ್ತು ಪೋಷಕರು ಹಾಗೂ ಶಾಲಾ ಮಂಡಳಿಯ ಪದಾಧಿಕಾರಿಗಳು ಸಂಗೀತ ಕಾರ್ಯಕ್ರಮ ಆಸ್ವಾದಿಸಿದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಶಾಲಾ ಪೂರ್ವ ವಿದ್ಯಾರ್ಥಿ ಶ್ರೀ ಕ್ರಷ್ಣಪ್ಪ ಗೌಡ ಪರಮಂಡಲ, ಶಾಲಾ ಪಾಲನಾ ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ, ಶಿಕ್ಷಕಿ ಜಲಜಾಕ್ಷಿ, ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕೇಶವ ಸಿ ಎ, ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಳ್ಳತ್ತಡ್ಕ, ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.