ಜಾಲ್ಸೂರು ಗ್ರಾಮದ ಸೋಣಂಗೇರಿಯ ಶ್ರೀ ಕೃಷ್ಣ ಭಜನಾ ಮಂದಿರದ ಅಭಿವೃದ್ಧಿ ದೃಷ್ಟಿಯಿಂದ ಇತ್ತೀಚೆಗೆ ಜರುಗಿದ ಸಾರ್ವಜನಿಕ ಸಭೆಯ ನಿರ್ಣಯದಂತೆ ಅಡಳಿತ ಸಭೆಯಲ್ಲಿ ನಿರ್ಣಯಿಸಿದ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಮುಂದಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನಡೆಸಲು ಶಿವಸುಬ್ರಹ್ಮಣ್ಯ ಜೋಯಿಸರ ಮಾರ್ಗದರ್ಶನದಲ್ಲಿ ಒಂದು ದಿನ ತಾಂಬೂಲ ಪ್ರಶ್ನಾ ಚಿಂತನಾ ಕಾರ್ಯಕ್ರಮವು ನ.14ರಂದು ನಡೆಯಿತು.
ಕಣಿಪಿಲ ಖಂಡಿಗೆಮೂಲೆ, ಕುಂಟಿಕಾನ, ಗೋಂಟಡ್ಕ, ಸೋಣಂಗೇರಿ, ಶಾಂತಿನಗರ, ನಡುಬೆಟ್ಟು, ಕುಕ್ಕನ್ನೂರು, ಗೋಂಟಡ್ಕ, ಬಾಂಜಿಕೋಡಿ ಭಾಗದ ಎಲ್ಲ ನಾಗರೀಕರ ಸಮ್ಮುಖದಲ್ಲಿ ಮುಂದಿನ ದಿನಗಳಲ್ಲಿ ಭಜನಾ ಮಂದಿರದ ಎಲ್ಲಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಕುರಿತಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಙಜನಾ ಮಂದಿರದ ಗೌರವಾಧ್ಯಕ್ಷ ರುಕ್ಮಯ್ಯ ಗೌಡ ಸುತ್ತುಕೋಟೆ, ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಸಂಚಾಲಕ ಸತ್ಯಶಾಂತಿ ತ್ಯಾಗಮೂರ್ತಿ, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಕೋಶಾಧಿಕಾರಿ ಶ್ರೀಮತಿ ಲೀಲಾವತಿ ನಡುಮನೆ, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ನಡುಮನೆ ಸೇರಿದಂತೆ ಭಜನಾ ಮಂದಿರದ ಪದಾಧಿಕಾರಿಗಳು ಸೇರಿದಂತೆ ಸೋಣಂಗೇರಿ ಭಾಗದವರು ಉಪಸ್ಥಿತರಿದ್ದರು.