ಪೆರಾಜೆ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ, ನೂತನ ರಾಜಗೋಪುರದ ಉದ್ಘಾಟನೆಯ ಆಮಂತ್ರಣ ಪತ್ರ ಬಿಡುಗಡೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಜ. ೩೦ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೂತನ ರಾಜಗೋಪುರದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆ ಇಂದು (ಜ.೪ರಂದು) ದೇವಳದ ವಠಾರದಲ್ಲಿ ನಡೆಯಿತು.
ದೇವತಕ್ಕರಾದ ರಾಮಕಜೆ ರಾಜಗೋಪಾಲರವರು ಆಮಂತ್ರ ಪತ್ರ ಬಿಡುಗಡೆಗೊಳಿಸಿದರು.


ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ಮಾಜಿ ಮೊಕ್ತೇಸರುಗಳಾದ ನಾಗೇಶ್ ಕುಂದಲ್ಪಾಡಿ, ಲೋಕನಾಥ ಅಮೆಚೂರು, ಸುರೇಶ್ ಪೆರುಮುಂಡ, ನಂಜಪ್ಪ ನಿಡ್ಯಮಲೆ, ಪದ್ಮಯ್ಯಕೆ.ಎಸ್., ಜೋಯಪ್ಪ ನಿಡ್ಯಮಲೆ, ಆರ್.ಡಿ.ಆನಂದ, ಬಿ.ವಿ.ಪುರುಷೋತ್ತಮ, ವಸಂತ ಎ.ಸಿ., ಭಾಸ್ಕರ ಕೋಡಿ, ಸೀತಾರಾಮ ಕೆ.ಸಿ., ರಮೇಶ ಪಿ.ಬಿ., ಭಾಸ್ಕರ ಅಡ್ಕ, ಮೇದಪ್ಪ ಎನ್.ಪಿ., ಉಪೇಂದ್ರ ಕುಂದಲ್ಪಾಡಿ, ಪ್ರವೀಣ್ ಮಜಿಕೋಡಿ, ಮನೋಜ್ ನಿಡ್ಯಮಲೆ, ತಿರುಮಲೇಶ್ವರ ನಿಡ್ಯಮಲೆ, ದಿನೇಶ ನಿಡ್ಯಮಲೆ, ಸರೋಜಿನಿ ಯಾಪಾರೆ, ಶೀಲಾವತಿ ನಿಡ್ಯಮಲೆ, ಕುಶಾಲಪ್ಪ ಕೆ.ಎಸ್.ಮೊದಲಾದವರು ಉಪಸ್ಥಿತರಿದ್ದರು.
ನಂತರ ಮಾಸಿಕ ಸಭೆ ನಡೆಯಿತು.