ಜ .5 ರಂದು ಆದರ್ಶ ಫ್ರೆಂಡ್ಸ್ ಚಡಾವು ಆಶ್ರಯದಲ್ಲಿ ಬಾಲಚಂದ್ರ ಕಳಗಿ ಸ್ಮರಣಾರ್ಥ 3 ನೇ ವರ್ಷದ ಗ್ರಾಮೋತ್ಸವ ಹಾಗೂ ಸಾಂಸ್ಕೃತಿಕ ವೈಭವ

0

ಆದರ್ಶ ಫ್ರೆಂಡ್ಸ್ ಕ್ಲಬ್ ಚಡಾವು ಕೊಡಗು ಸಂಪಾಜೆ ಆಶ್ರಯದಲ್ಲಿ ಬಾಲಚಂದ್ರ ಕಳಗಿ ಸ್ಮರಣಾರ್ಥ 3ನೇ ವರ್ಷದ ಗ್ರಾಮೋತ್ಸವ,ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಕೊಡಗು ಸಂಪಾಜೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜ. 5 ರಂದು ನಡೆಯಲಿದೆ.

ಜ.5 ಬೆಳಿಗ್ಗೆ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದಿದೆ. ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 6 ಗಂಟೆಯಿಂದ ರಂಗಮಯೂರಿ ಆಕಾಡೆಮಿ ಎನ್.ಆರ್ ಪುರ ಚಿಕ್ಕ ಮಗಳೂರು ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.