ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಮುಂಬರುವ ಸಿ.ಇ.ಟಿ. ಪರೀಕ್ಷೆಗೆ ತಯಾರಿ ನಡೆಸಲು ಸಹಾಯವಾಗುವ ದೃಷ್ಟಿಯಿಂದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಉಚಿತವಾಗಿ ಪ್ರತಿವಾರ ಸಿ.ಇ.ಟಿ. ಮಾದರಿಯ ಅಣಕು ಪರೀಕ್ಷೆಗಳನ್ನು((Mock Tests)) ಆನ್ಲೈನ್ ಮೂಲಕ ನಡೆಸಲಾಗುವುದು ಎಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ), ಕಮಿಟಿ -ಬಿ. ಇದರ ಅಧ್ಯಕ್ಷರಾಗಿರುವ ಡಾ. ರೇಣುಕಾಪ್ರಸಾದ್ ಕೆ.ವಿ. ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ. ಮತ್ತು ಪ್ರಾಂಶುಪಾಲ ಡಾ. ಸುರೇಶ ವಿ. ಮಾರ್ಗದರ್ಶನದಲ್ಲಿ ನಡೆಯುವ ಈ ಪರೀಕ್ಷೆಗಳು ಜನವರಿ ತಿಂಗಳ ಮೊದಲ ವಾರದಿಂದ ಪ್ರಾರಂಭಗೊಳ್ಳಲಿವೆ. ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲ ವಿದ್ಯಾರ್ಥಿಗಳು ಮೊಬೈಲ್ ಫೋನ್ ಅಥವಾ ಲ್ಯಾಪ್ಟಾಪ್ ಮೂಲಕ ಈ ಆನ್ಲೈನ್ ಪರೀಕ್ಷೆಗಳನ್ನು ಉತ್ತರಿಸಿ ತಮ್ಮ ಪರೀಕ್ಷಾಭ್ಯಾಸ ಮತ್ತು ಸಮಯ ನಿರ್ವಹಣ -ಕೌಶಲ್ಯವನ್ನು ಉತ್ತಮಗೊಳಿಸಲು ಇದೊಂದು ಸುವರ್ಣಾವಕಾಶ.
ದ್ವಿತೀಯ ಪಿ.ಯು.ಸಿ. ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಗಳಲ್ಲಿ ಪ್ರತಿವಾರ ಒಂದು ವಿಷಯದಂತೆ ಸಿ.ಇ.ಟಿ. ಪರೀಕ್ಷೆ ಪ್ರಾರಂಭಗೊಳ್ಳುವ ತನಕ ಪ್ರತಿ ಭಾನುವಾರ ಪರೀಕ್ಷೆಗಳನ್ನು ನಡೆಸಲಾಗುವುದು. ಪಠ್ಯಕ್ರಮಗಳನ್ನು ಈ ಪರೀಕ್ಷೆಗೆ ನೋಂದಾಯಿಸುವ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಗ್ರೂಪ್‌ಗಳ ಮುಖಾಂತರ ತಿಳಿಸಲಾಗುವುದು. ಸಿ.ಇ.ಟಿ. ದರ್ಜೆಯ ಪ್ರಶ್ನೆಪತ್ರಿಕೆಗಳನ್ನು ಆಯಾ ವಿಷಯಗಳಲ್ಲಿ ನುರಿತ ಪಿ.ಯು.ಸಿ. ಉಪನ್ಯಾಸಕರ ಮೂಲಕ ತಯಾರಿಸಲಾಗಿದೆ. ೪೦ ಪ್ರಶ್ನೆಗಳಿರುವ ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಆನ್ಲೈನ್‌ನಲ್ಲಿ ಉತ್ತರಿಸಲು ಪ್ರಾರಂಭಿಸಿದನಂತರ ಅದನ್ನುಪೂರ್ಣಗೊಳಿಸಲು ೬೦ ನಿಮಿಷ ಕಾಲಾವಕಾಶವಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ದಿನದ ಯಾವುದೇ ಸಮಯದಲ್ಲಿ ತಮಗೆ ಒಂದು ಗಂಟೆ ತಡೆಯಿಲ್ಲದೆ ಪರೀಕ್ಷೆಯನ್ನು ಉತ್ತರಿಸಲು ವಿರಾಮವಿರುವಾಗ, ಪೆನ್ನು ಮತ್ತು ಪೇಪರ್ ಸಿದ್ಧಪಡಿಸಿಕೊಂಡು, ಮೊಬೈಲ್ ಅಥವಾ ಲ್ಯಾಪ್ಟಾಪ್ ಮುಖಾಂತರ ಆನ್ಲೈನ್‌ನಲ್ಲಿ ಪರೀಕ್ಷೆಯನ್ನು ಉತ್ತರಿಸಬಹುದು.
ಡಾ| ಕೆ.ವಿ.ಜಿ. ವಿದ್ಯಾರ್ಥಿವೇತನ ಪರೀಕ್ಷೆ: ಸಾಪ್ತಾಹಿಕ (Weekly) ಸಿ.ಇ.ಟಿ. ಮಾದರಿಯ ಅಣಕು ಪರೀಕ್ಷೆಗಳಲ್ಲದೆ, ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳ ಇಂಜಿನಿಯರಿಂಗ್ ಕಲಿಕೆಗೆ ನೆರವಾಗಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನೋಂದಾಯಿತ ವಿದ್ಯಾರ್ಥಿಗಳಿಗೆ ಡಾ| ಕೆ.ವಿ.ಜಿ. ವಿದ್ಯಾರ್ಥಿವೇತನ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳು ಕಾಲೇಜಿನ ಬೋಧನಾಶುಲ್ಕದಲ್ಲಿ ಶೇ. ೧೦೦ರ ವರೆಗೆ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ. ನೋಂದಣಿ ಹಾಗು ಪರೀಕ್ಷಾಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಇದಕ್ಕಾಗಿ ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಈ ವಿದ್ಯಾರ್ಥಿವೇತನ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ ವಾರ್ಷಿಕ ಸುಮಾರು ೪೮ ಲಕ್ಷ ರೂಪಾಯಿ ವ್ಯಯಿಸಲಿದೆ.
ದಾಖಲಾತಿ: ಇದಲ್ಲದೆ ೨೦೨೫-೨೬ನೇ ಸಾಲಿನ ಇಂಜಿನಿಯರಿಂಗ್ ಕೋರ್ಸುಗಳ ದಾಖಲಾತಿಯು ಪ್ರಾರಂಭಗೊಂಡಿದ್ದು ಸೀಮಿತ ಸೀಟುಗಳಿಗೆ ಮುಂಗಡ ಕಾದಿರಿಸುವಿಕೆಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಹಾಗು ಪೋಷಕರು ಈ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಿ.ಇ.ಟಿ. ಮಾದರಿಯ ಅಣಕು ಪರೀಕ್ಷೆ ಮತ್ತು
ಡಾ| ಕೆ.ವಿ.ಜಿ. ವಿದ್ಯಾರ್ಥಿವೇತನ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ವಾಟ್ಸಪ್ ನಂಬರ್ ಬಳಸಿಕೊಂಡು ಇಲ್ಲಿ ನೀಡಲಾಗಿರುವ ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. https://kvgcommitteeb.org/kvgce/scholarship