ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಂಪ್ಯೂಟರ್ ಇಂಜಿನಿಯರ್ ಮೇಲೆ ಅವ್ಯವಹಾರದ ಆರೋಪ; ಕೆಲಸದಿಂದ ವಜಾಗೊಳಿಸಲು ಶಿಫಾರಸ್ಸು

0

ಅವ್ಯಹಾರ ಮಾಡಿಲ್ಲ , ವೃಥಾ ಆರೋಪ : ಇಂಜಿನಿಯರ್ ಪ್ರತಿಕ್ರಿಯೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊರ ಗುತ್ತಿಗೆ ನೌಕರರೊಬ್ಬರು ಅಧಿಕಾರಿಗಳ ಗಮನಕ್ಕೆ ತಾರದೆ ಕುಕ್ಕೆ ದೇಗುಲದ ಆಡಳಿತ ಕಚೇರಿಯ ಕಂಪ್ಯೂಟರ್ ನ ಪಾಸ್ ವರ್ಡ್ ಪಡೆದು ದುರ್ಬಳಕೆ ಮಾಡಿದ್ದಾರೆಂದು ಆ ಕಂಪ್ಯೂಟರ್ ಸಿಬ್ಬಂದಿಯನ್ನು ವಜಾ ಗೊಳಿಸಲು ಶಿಫಾರಸು ಮಾಡಿದ ಘಟನೆ ವರದಿಯಾಗಿದೆ.

ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಯ ವ್ಯಾಪ್ತಿಯ ಕೆಲಸದಲ್ಲಿ ಟೆಂಡರ್ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಕಂಪ್ಯೂಟರ್ ಇಂಜಿನಿಯರ್ ಭರತ್ ಎಂಬವರನ್ನು ಕೆಲಸದಿಂದ ವಜಾ ಮಾಡಲು ಶಿಫಾರಸು ಮಾಡಲಾಗಿದ್ದು,
ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಯವರು ಖಾಸಗಿ ಗುತ್ತಿಗೆ ವಹಿಸಿಕೊಂಡಿರುವ ಸ್ವಿಸ್ ಶಾರ್ಪ್ ವಾಚ್ ಇನ್ವೆಸ್ಟಿಗೇಶನ್ ಸೆಕ್ಯುರಿಟಿ ಸಂಸ್ಥೆಗೆ ದೂರು ನೀಡಿದ ಮೇರೆಗೆ ಸಂಸ್ಥೆಯು ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಭರತ್ ಅವರನ್ನು ಸಂಪರ್ಕಿಸಿದಾಗ ನನ್ನ ಮೇಲೆ ವೃಥಾ ಆರೋಪ ಮಾಡಲಾಗಿದ್ದು ಕೇಸ್ ವರ್ಕರ್ ಹೇಳಿದ ಕೆಲಸಗಳನಷ್ಟೆ ನಾವು ಮಾಡುವುದು. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ವೃಥಾ ಆರೋಪ ಹೊರಿಸಲಾಗಿದೆ. ಈಗಲೂ ಕರ್ತವ್ಯದಲ್ಲಿರುವುದಾಗಿ ತಿಳಿಸಿದ್ದಾರೆ.