ಸುಳ್ಯ : ಸ್ತನ್ಯಪಾನದ ಮಹತ್ವ ಹಾಗೂ ಗರ್ಭ ಕೊರಳಿನ ಕ್ಯಾನ್ಸರ್ ಕುರಿತು ಮಾಹಿತಿ ಕಾರ್ಯಕ್ರಮ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ರೋಟರಿ ಕ್ಲಬ್ ಸುಳ್ಯ ಹಾಗೂ ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ (ರಿ) ಸುಳ್ಯ ಇದರ ಸಹಯೋಗದಲ್ಲಿ ಸ್ತನ್ಯಪಾನದ ಮಹತ್ವ ಹಾಗೂ ಗರ್ಭ ಕೊರಳಿನ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ಆ.20 ರಂದು ಸ್ತ್ರೀ ಶಕ್ತಿ ಭವನ ಸುಳ್ಯದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿರೋಗ ವಿಭಾಗ ಮುಖ್ಯಸ್ಥರು ಮತ್ತು ಪ್ರೊಫೆಸರ್ ಡಾ.ಗೀತಾ ದೊಪ್ಪ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಶ್ರೀಮತಿ ಶೈಲಜಾ ವಹಿಸಿದ್ದರು.


ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ರೊ.ಯೋಗಿತ ಗೋಪಿನಾಥ್, ಕಾರ್ಯದರ್ಶಿ ರೊ.ಡಾ. ಹರ್ಷಿತಾ ಪುರುಷೋತ್ತಮ್, ಕಮ್ಯೂನಿಟಿ ಸರ್ವಿಸ್ ಡೈರೆಕ್ಟರ್ ರೊ. ಸನತ್ ಪಿ.ಆರ್. ಮತ್ತು ವೆಬ್ ಕೋಆರ್ಡಿನೇಟರ್ ರೊ. ಸತೀಶ್ ಕೆ.ಜಿ. ಉಪಸ್ಥಿತರಿದ್ದರು.