ಆ.23 : ಐವರ್ನಾಡಿನಲ್ಲಿ ವಿವಿಧ ಇಲಾಖೆಯಲ್ಲಿ ಲಭ್ಯವಾಗುವ ಯೋಜನೆಗಳ ಮಾಹಿತಿ ಮತ್ತು ನೋಂದಣಿ ಶಿಬಿರ

0

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಸಹಕಾರದೊಂದಿಗೆ ಸರಕಾರದ ವಿವಿಧ ಇಲಾಖೆಗಳ ಅಡಿಯಲ್ಲಿ ಲಭ್ಯವಾಗುವ ಯೋಜನೆ ಮತ್ತು ತಿದ್ದುಪಡಿ,ನೋಂದಣಿ ಶಿಬಿರವು ಆ.23 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ ಗಂಟೆ 10.00 ರಿಂದ ಸಂಜೆ 5.00 ರವರೆಗೆ ಶಿಬಿರವು ನಡೆಯಲಿದ್ದು ಬೆಳಿಗ್ಗೆ ಸಭಾ ಕಾರ್ಯಕ್ರಮ ನಡೆಯಲಿದೆ.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿ ವಹಿಸುವರು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸುಳ್ಯ ಅಂಚೆ ಪಾಲಕರಾದ ಮೋಹನ್,ಮೆಸ್ಕಾಂ ಕಿರಿಯ ಅಭಿಯಂತರ ಪ್ರಸಾದ್ ಕತ್ಲಡ್ಕ, ಗ್ರಾಮ ಆಡಳಿತ ಅಧಿಕಾರಿ ಸುಜನ್ ಉಪಸ್ಥಿತರಿರುವರು.


ಭಾರತೀಯ ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳು,ವಿಮಾ ಯೋಜನೆಗಳು,ಸಮಗ್ರ ರಕ್ಷಣಾ ಯೋಜನೆಗಳ ಮಾಹಿತಿ
ಕೃಷಿ ನೀರಾವರಿ ಪಂಪು ಸೆಟ್ಟುಗಳ ವಿದ್ಯುತ್ ಮೀಟರ್ ಹೆಸರು ಬದಲಾವಣೆ ಹಾಗೂ ಮೀಟರ್ ಸಂಖ್ಯೆಗೆ ಆಧಾರ್ ಜೋಡಣೆ.


ಕೃಷಿಕರ ಪಹಣಿ ಪತ್ರಕ್ಕೆ ಆಧಾರ್ ಜೋಡಣೆ
ಆಧಾರ್ ಚೀಟಿ ತಿದ್ದುಪಡಿ ನಡೆಯಲಿದೆ.ಗ್ರಾಮಸ್ಥರು ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.ಹೆಚ್ಚಿನ ಮಾಹಿತಿಗಾಗಿ‌ ಗ್ರಾಮ ಪಂಚಾಯತನ್ನು ಸಂಪರ್ಕಿಸುವುದು.