ಸವಣೂರಿನ ಶಿಲ್ಪಿ ಸವಣೂರು ಕೆ. ಸೀತಾರಾಮರ ರೈಯವರು ಅಧ್ಯಕ್ಷರಾಗಿರುವ ಪುತ್ತೂರಿನ ದರ್ಬೆಯಲ್ಲಿರುವ ಪ್ರಶಾಂತ್ ಮಹಲಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಆಶಯದಲ್ಲಿ ವಿದ್ಯಾ ನಿಧಿ – ಸಹಾಯಧನ ವಿತರಣಾ ಸಮಾರಂಭ ಆ. 24ರಂದು ಪೂರ್ವಾಹ್ನ 11:30 ರಿಂದ ಪ್ರಶಾಂತ್ ಮಹಲ್ ನ ಸನ್ನಿಧಿ ಹಾಲ್ ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ಯರಾದ ಜುಬಿನ್ ಮೋಹಾಪಾತ್ರ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ವಹಿಸಲಿದ್ದಾರೆ. ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸಹಾಯಧನ ವಿತರಣೆ ಮಾಡಲಿದ್ದಾರೆ. ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕದರಾದ ಎಸ್.ಎಮ್ ರಘು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30 ಕ್ಕೆ ಆದರ್ಶ ವಿವಿಧೋದ್ದೇಶದ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ.
ವರದಿ ಸಾಲಿನಲ್ಲಿ ರೂ. 736.63 ಕೋಟಿ ವ್ಯವಹಾರ ನಡೆಸಿದ ಆದರ್ಶ ವಿವಿಧೋದ್ದೇಶದ ಸಹಕಾರ ಸಂಘಪ
ಆದರ್ಶ ವಿವಿಧೋದ್ದೇಶದ ಸಹಕಾರ ಸಂಘ 2023-24ರಲ್ಲಿ ರೂ. 131.93 ಕೋಟಿ ಠೇವಣಿಯನ್ನು ಸಂಗ್ರಹಿಸಿ, 109.69 ಕೋಟಿಯಷ್ಟು ಸಾಲವಿತರಿಸಿ ರೂ. 736.69 ಕೋಟಿಯಷ್ಟು ದಾಖಲೆಯ ವ್ಯವಹಾರ ನಡೆಸಿ ರೂ. 1.65ಕೋಟಿಯಷ್ಟು ಲಾಭ ಗಳಿಸಿದೆ. ಸಂಘವು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 14 ಶಾಖೆಗಳನ್ನು ಹೊಂದಿದ್ದು, 2024-25ರಲ್ಲಿ ಮಂಗಳೂರಿನಲ್ಲಿ 15ನೇ ಶಾಖೆಯನ್ನು ತೆರೆಯುವ ಯೋಜನೆಯನ್ನು ಹಾಕಿಕೊಂಡಿದೆ.
ರೂ. 5.00 ಲಕ್ಷ ವಿದ್ಯಾರ್ಥಿ ವೇತನ ವಿತರಣೆ
ಪ್ರತೀ ವರ್ಷದಂತೆ ಈ ವರ್ಷವೂ 14 ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಆಯ್ದ ಸರಕಾರಿ ಶಾಲೆಗಳಲ್ಲಿ 8 ಮತ್ತು 9 ನೇ ತರಗತಿಯಲ್ಲಿ ಕಳಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ರೂ 2 ಸಾವಿರದಂತೆ ಒಟ್ಟು 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ – ಸಹಾಯಧನ ವಿತರಿಸಲಾಗುವುದು. ಸವಣೂರಿನಲ್ಲಿ ಈಗಾಗಲೇ 0.75 ಸೆಂಟ್ಸ್ ಜಾಗವನ್ನು ರೂ. 1.29 ಕೋಟಿ ವೆಚ್ಚದಲ್ಲಿ ಖರಿದಿ ಮಾಡಿ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸಂಘವು 25 ವರ್ಷ ಪೂರೈಸುವುದರ ಒಳಗೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಸವಣೂರು ಕೆ. ಸೀತಾರಾಮ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.