ಸುಬ್ರಹ್ಮಣ್ಯ ಗ್ರಾ.ಪಂ. ಗ್ರಾಮ ಸಭೆ

0

ಸುಬ್ರಹ್ಮಣ್ಯ ಗ್ರಾ.ಪಂ ನ ಗ್ರಾಮ ಸಭೆಯು ಆ.12 ರಂದು ನಡೆಯಿತು. ಸಭೆಯಲ್ಲಿ ರಸ್ತೆಗೆ ತಾಗಿ ಕಾಂಪೌಂಡ್ ನಿರ್ಮಾಣ ಮಾಡುತ್ತಿರುವ, ಅನಧಿಕೃತ ಅಂಗಡಿಗಳ ಕಾರ್ಯಾಚರಣೆ ಬಗ್ಗೆ, ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಳಾಂತರ ಬಗ್ಗೆ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ ವಹಿಸಿದ್ದರು, ನೊಡೆಲ್ ಅಧಿಕಾರಿಯಾಗಿ ಕಡಬ ತಾ.ಪಂ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ. ಕಜೆಮೂಲೆ ಇದ್ದರು. ಉಪಾಧ್ಯಕ್ಷರಾದ ವೆಂಕಟೇಶ ಎಚ್.ಎಲ್, ಗ್ರಾ.ಪಂ ಸದಸ್ಯರಾದ ರಾಜೇಶ್ ಕೆ, ಮಲ್ಲಿಕಾ, ಭಾರತಿ ದಿನೇಶ್, ನಾರಾಯಣ ಅಗ್ರಹಾರ, ದಿವ್ಯ, ರಾಜೇಶ್ ಎನ್.ಎಸ್, ಸವಿತಾ ಕೆ, ಹರೀಶ್ ಇಂಜಾಡಿ, ಸೌಮ್ಯ, ಜಯಂತಿ, ಮೋಹನ ಕೆ, ಶಶಿಕಲಾ, ದಿಲೀಪ್ ಉಪ್ಪಳಿಕೆ, ಭವ್ಯ ಕುಮಾರಿ ಕೆ.ಎಲ್, ಶಿವರಾಮ ನೆಕ್ರಾಜೆ, ಪುಷ್ಪಲತಾ, ಗಿರೀಶ್ ಆಚಾರ್ಯ, ಲಲಿತಾ ಜಿ, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋನಪ್ಪ ಡಿ ವರದಿ ವಾಚಿಸಿದರು.

ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಕಾಂಪೌಂಡ್ ಗೂ ಡಂಡ ಹಾಕಬೇಕು. ರಸ್ತೆ ಬದಿ ರಸ್ತೆ ಆಕ್ರಮಿಸಿ ಕಾಂಪೌಂಡ್ ಮಾಡುತ್ತಿದ್ದಾರೆ‌, ರಸ್ತೆಯಲ್ಲಿ ಕಪೌಂಡ್ ನಿರ್ಮಿಸಿದ ಕಾರಣ ವಾಹನ ಸಂಚಾರ ಕಷ್ಟ ವಾಗುತ್ತಿದೆ, ಅನಧಿಕೃತವಾಗಿ ವಾಗಿರುವ ಕಪೌಂಡ್ ಇದ್ದರೆ ತೆರವು ಮಾಡಿಸಿ ಎಂದು ಶಿವರಾಮ ರೈ ಹೇಳಿದರು. ಮನೆಗಷ್ಟೆ ಅನುಮತಿ ಕೊಡುತ್ತೇವೆ, ಕಾಂಪೌಂಡ್ ವಿಚಾರವಾಗಿ ಯಾವುದೇ ನಿಯಮ ರೂಪಿಸಿಲ್ಲ. ಇಂದು ಇಂದನ್ನು ನಿರ್ಣಯ ಮಾಡುತ್ತೇವೆ, ‌ ಮುಂದಿನ ದಿನಗಳಲ್ಲಿ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಮಹೇಶ್ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಮನೋಹರ ನಾಳ ಅವರು ರಸ್ತೆ ಬದಿಯವರೆಗೆ ಕೃಷಿ ಮಾಡುತ್ತಾರೆ. ಅವರ ಬಗ್ಗೆಯೂ ಕ್ರಮ ಕೈಗೊಳ್ಳಿ ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿ ಕಷ್ಟ ಎಂದರು.

ವ್ಯಾಪಾರ ತೆರಿಗೆ ಸಂಗ್ರಹಿಸುತ್ತೀರಿ, ಆದರೆ ಪರ್ಮಿಶನ್ ಇಲ್ಲದೆ ಹಲವು ಅಂಗಡಿ ನಡೆಯುತ್ತಿದೆ. ಇದರ ಬಗ್ಗೆ ಏನು ಮಾಡುತ್ತೀರಿ ತೆರಿಗೆ ಸಂಗ್ರಹ ಕಡಿಮೆ ಆಗುತ್ತಿದೆ ಎಂದು ಕೃಷ್ಣಮೂರ್ತಿ ಕೇಳಿದರು. ಮುಂದಿನ ದಿನ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ತಿಳಿಸಿದರು.

ಕಾಶಿಕಟ್ಟೆಯಲ್ಲಿ ಆಗಬೇಕಾದ ತುರ್ತು ಚಿಕಿತ್ಸಾ ಘಟಕವನ್ನು ಪರ್ವತ ಮುಖಿಗೆ ಸ್ಥಳಾಂತರಿಸಲು ಕಿಶೋರ್ ಶಿರಾಡಿ ಕಾರಣ. ಆದರೆ ಇಲ್ಲಿ ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ಸಂಜೆ ಆದ ಮೇಲೆ ಚಿಕಿತ್ಸೆ ಲಭ್ಯವಿಲ್ಲ. ಇಲ್ಲಿ ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸೆ ಸಿಗದೆ ಕೆಲವರು ನಿಧನರಾಗುತ್ತಿದ್ದಾರೆ. ಈಗ ಆದಂತ ತೊಂದರೆಗೆ ಯಾರು ಜವಾಬ್ದಾರಿ. ನಿಟ್ಟೆ ಆಸ್ಪತ್ರೆಯಲ್ಲಿ ಕೂಡ ಆದಿತ್ಯವಾರ ಸೇವೆ ಇಲ್ಲ. ಸುಬ್ರಹ್ಮಣ್ಯದಲ್ಲಿ 24×7 ಆಸ್ಪತ್ರೆ ಇಲ್ಲ ಅಂದರೆ ನಮಗೆ ತೊಂದರೆ ಆಗುತ್ತಿದೆ, ತುರ್ತು ಚಿಕಿತ್ಸಾ ಘಟಕ ಸ್ಥಳಾಂತರಕ್ಕೆ ಕಾರಣದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಶಿವರಾಮ ರೈ ವಾದಿಸಿದರು.

ಸುಬ್ರಹ್ಮಣ್ಯ ಅಂಗಡಿಗಳ ಮೇಲೆ, ಹೊಟೇಲ್ ಗೆ ದಾಳಿ ಮಾಡಬೇಕು, ತಂಬಾಕು ಗುಟ್ಕಾ ಎಗ್ಗಿಲ್ಲದೆ ಮಾರಾಟ ಆಗ್ತಿದೆ. ಎಲ್ಲೆಂದರಲ್ಲಿ ಪ್ಯಾಡ್, ಕಸ ಬಿಸಾಡುವುದು ಮಾಡುತ್ತಾರೆ. ಏನಾಂದ್ರು ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಕೇಳಿದರು. 15 ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಮಹೇಶ್ ಹೇಳಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಬರ್ತದೆ, ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಎಂದು ಅಚ್ಚುತ ಗೌಡರು ಕೇಳಿದರು. ಕಸ್ತೂರಿ ರಂಗನ್ ವರದಿ ಬಗ್ಗೆ ಹೇಳಲಾಗುವುದಿಲ್ಲ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದರು. ಜಮೀನಲ್ಲಿ ಯಾವುದೆ ಕಾಮಗಾರಿ ಕಾರ್ಯಚರಿಸಲಿದ್ದರೆ ಫಾರೆಸ್ಟ್ ಕ್ಲಿಯರೆನ್ಷ್ ಕೊಡುವ ಅಧಿಕಾರ ಅರಣ್ಯ ಇಲಾಖೆ ಇರುತ್ತದೆ ಎಂದು ಮಾಹಿತಿ ನೀಡಿದರು.

ಐನೆಕಿದುವಿನಲ್ಲಿ ನಿವೇಶನ ರಹಿತರಿಗೆ 2 ಎಕ್ರೆ ಮುಂಜೂರು ಆಗಿದೆ. ಆರ್.ಟಿ.ಸಿ ಆಗಿದೆ ಆದರೆ ಆ ಭೂಮಿ ಅರಣ್ಯ ಇಲಾಖೆ ಎಂದು ಬಂದಿರುತ್ತದೆ ಅದು ಹೇಗಾಯ್ತು ಎಂದು ಸತೀಶ್ ಕೇಳಿದರು. ಅದಕ್ಕೆ ಅರಣ್ಯ ಇಲಾಖೆಯ ಮನೋಜ್ ಅವರು ಆ ಜಾಗ ಅರಣ್ಯ ಇಲಾಖೆ ನೆಟ್ಟ ನೆಡು ತೋಪು ಆಗಿರುತ್ತದೆ. ಕಂದಾಯ ಇಲಾಖೆ ಜಾಗ ಇದ್ರೂ ನೆಡು ತೋಪು ಆದರೆ ಅದು ಅರಣ್ಯ ಎಂದು ತೋರಿಸುತ್ತದೆ ಹಾಗಿರುವಾಗ ಅದು ಅರಣ್ಯ ಇಲಾಖೆಯ ಸ್ವತ್ತಿ ಎಂದಾಗುತ್ತದೆ ಎಂದರು.