ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಂಗಳೂರು ಫಾರ್ಮಸ್ಯುಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ಸಹಯೋಗದೊಂದಿಗೆ ಆ.21ರಂದು ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಾಗೂ ಆ. 22ರಂದು ಕಿರಿಯ ವೈದ್ಯರುಗಳಿಗೆ ಸಂವಹನ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ನಡೆದ ಎರಡು ದಿನದ ‘ಸಕ್ಷಮ್’ ಕಾರ್ಯಾಗಾರದ ಸಮಾರೋಪ ಸಮಾರಂಭವು ಆ. 22ರಂದು ನಡೆಯಿತು.
ಕಾರ್ಯಾಗಾರವನ್ನು ನಡೆಸಿಕೊಟ್ಟ ಶ್ರೀಹರಿ ಪಿ. ಗುಪ್ತ ಇವರನ್ನು ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊ. ಡಾ. ಕವಿತಾ ಬಿ.ಯಂ. ಸ್ಮರಣಿಕೆ ನೀಡಿ ಗೌರವಿಸಿದರು. ಸಮಾರೋಪ ಸಮಾರಂಭದಲ್ಲಿ ಮೆಡಿಕಲ್ ಆಫೀಸರ್ ಡಾ. ಸನತ್ ಕುಮಾರ್ ಡಿ.ಜಿ., ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ವರ್ಗದವರು, ಕಾರ್ಯಗಾರದ ಫಲಾನುಭವಿಗಳಾದ ಕಿರಿಯ ವೈದ್ಯರುಗಳು ಮತ್ತು ಸ್ನಾಥಕೋತ್ತರ ವಿದ್ಯಾರ್ಥಿಗಳು ಹಾಗೂ ಬೆಂಗಳೂರು ಫಾರ್ಮಸಿಟಿಕಲ್ಸ್ ಹಾಗೂ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್ ಇದರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ಅನುಷಾ ಮಡಪ್ಪಾಡಿ ಹಾಗೂ ಡಾ. ಅಪೂರ್ವ ನಿರೂಪಿಸಿ, ಡಾ. ಅನುಷಾ ಮಡಪ್ಪಾಡಿ ವಂದಿಸಿದರು.