ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಶಿಶುವಿಹಾರ ಮಕ್ಕಳ ತಿಂಗಳ ಚಟುವಟಿಕೆ ಕಾರ್ಯಕ್ರಮದಲ್ಲಿ ರೈನಿ ಡೇ( ಮಳೆಯ ದಿನ )ವನ್ನು ಆ. 21ರಂದು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಳೆಯಿಂದ ಬೆಳೆ, ಮಳೆಯ ಒಂದೊಂದು ಹನಿಯೂ ಅತ್ಯಮೂಲ್ಯ, ನೀರನ್ನು ಉಳಿಸಿ ಎಂಬ ಸಂಕಲ್ಪದೊಂದಿಗೆ ಮಕ್ಕಳು ಕೊಡೆ ಹಿಡಿದು ಸಂತಸ ಸಂಭ್ರಮಗಳಿಂದ ಹಾಡಿ ನಲಿದು ಮಳೆ ವಾತಾವರಣವನ್ನು ಸವಿದರು.
ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ, ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಎಲ್.ಕೆ.ಜಿ, ಯು.ಕೆ.ಜಿ ಶಿಕ್ಷಕರ ಅಮೂಲ್ಯವಾದ ಪರಿಶ್ರಮಕ್ಕೆ ಅಭಿನಂದಿಸಿದರು. ಪೋಷಕರು ಮಕ್ಕಳಿಗೆ ಕಾಗದ ದೋಣಿಗಳನ್ನು, ಕೊಡೆ, ಮಳೆಯ ಕೋಟ್, ಇವುಗಳನ್ನು ಕೊಟ್ಟು ಸಹಕರಿಸಿದರು.