Home ಕ್ರೈಂ ನ್ಯೂಸ್ ನೆಲ್ಲೂರು ಕೆಮ್ರಾಜೆ ಕೊಲೆ ಮತ್ತು ಆತ್ಮಹತ್ಯೆಯ ಘಟನಾ ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಭೇಟಿ

ನೆಲ್ಲೂರು ಕೆಮ್ರಾಜೆ ಕೊಲೆ ಮತ್ತು ಆತ್ಮಹತ್ಯೆಯ ಘಟನಾ ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಭೇಟಿ

0

ನಿನ್ನೆ ರಾತ್ರಿ ನೆಲ್ಲೂರು ಕೆಮ್ರಾಜೆಯ ಹಲ್ದಡ್ಕ ಬಳಿಯ ಕೋಡಿಮಜಲು ಎಂಬಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಪಶ್ಚಿಮ ವಲಯದ ಐಜಿ ಅಮಿತ್ ಸಿಂಗ್ ಇಂದು ಭೇಟಿ ನೀಡಿ ಕೊಲೆ ಮತ್ತು ಆತ್ಮಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೃತದೇಹಗಳನ್ನು ತೆಗೆದು ಎರಡು ಆಂಬ್ಯುಲೆನ್ಸ್‌ಗಳಲ್ಲಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು.


ಈ ಸಂದರ್ಭದಲ್ಲಿ ಪುತ್ತೂರು ಡಿವೈಎಸ್‌ಪಿ ಅರುಣ್ ನಾಗೇಗೌಡ, ಎಸ್.ಪಿ. ಯತೀಶ್, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದರು.

NO COMMENTS

error: Content is protected !!
Breaking