ಸಂಪಾಜೆ ಕಟೀಲು ಶ್ರೀ ದುರ್ಗಾ ಪರಮೇಶ್ವರ ಸೇವಾ ಸಮಿತಿಗೆ ಧರ್ಮಸ್ಥಳದಿಂದ ರೂ. 1 ಲಕ್ಷ ಮಂಜೂರುಗೊಳಿಸಲಾಗಿದೆ. ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನಾಧಿಕಾರಿ ಮಾಧವರವರು ಇದರ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಸೋಮಶೇಖರ ಪೈಕ ರಾಮಚಂದ್ರ ಕಲ್ಲಗದ್ದೆ ಒಕ್ಕೂಟದ ಅಧ್ಯಕ್ಷ ಈಶ್ವರ ಆಚಾರ್ಯ ಕಲ್ಲುಗುಂಡಿ ಮಹಾವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ, ಮುತ್ತುಮಾರಿಯಮ್ಮ ದೈವಸ್ಥಾನದ ಅಧ್ಯಕ್ಷ ಜ್ಞಾನಶೀಲನ್, ಒಕ್ಕೂಟದ ಉಪಾಧ್ಯಕ್ಷ ತ್ಯಾಗರಾಜ್, ಮಾಜಿ ಅಧ್ಯಕ್ಷ ಸಾವಿತ್ರಿ ಕೈಪಡ್ಕ, ಮಾಜಿ ಉಪಾಧ್ಯಕ್ಷ ಭೋಜ, ಮೇಲ್ವಿಚಾರಕ ಗಂಗಾಧರ, ಸೇವಾ ಪ್ರತಿನಿಧಿ ಜಯಲಕ್ಷ್ಮಿ ಮತ್ತು ಸದಸ್ಯರು ಉಪಸ್ಥಿತರಿದ್ದರು.