ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಭೂ ಮಂಜೂರಾತಿಗೆ ಹೈ ಕೋರ್ಟ್ ತಡೆಯಾಜ್ಞೆ ಸುಳ್ಯದ ನ್ಯಾಯವಾದಿಗಳಿಂದ ವಾದ ಮಂಡನೆ

0

ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನೊಳಗೆ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟಿಗೆ, 2022ರಲ್ಲಿ ಮಂಜೂರಾಗಿದ್ದ 2 ಎಕರೆ ಜಮೀನಿಗೆ ಮಾನ್ಯ ಹೈಕೋರ್ಟ್ ಆ. 22ರಂದು ತಡೆಯಾಜ್ಞೆ ನೀಡಿದೆ.

ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ಮಾಡಿರುವ ಜಮೀನು,1982 ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸರ್ವೇ ನಂಬರ್ 149/2 ರಲ್ಲಿ 8.40 ಎಕರೆ ಜಮೀನನ್ನು ಮಂಜೂರಾಗಿದ್ದು, ಅದೇ ಜಾಗದಲ್ಲಿ ಈಗ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ 2 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿರುವುದು ಕಾನೂನು ಬಾಹಿರ ಎಂದು ವಿಶ್ವವಿದ್ಯಾಲಯ ಹೈಕೋರ್ಟ್ ಮೆಟ್ಟಲೇರಿದ್ದು, ವಿಶ್ವ ವಿದ್ಯಾಲಯದ ವಾದವನ್ನು ಆಲಿಸಿದ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಸ್ಟಿಸ್ ಸಚಿನ್ ಮಗದಮ್ ರವರು ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟಿಗೆ ಮಾಡಿರುವ ಮಂಜೂರಾತಿಗೆ ತಡೆಯಾಜ್ಞೆ ಹೊರಡಿಸಿದರು. ವಿಶ್ವವಿದ್ಯಾಲಯದ ಪರವಾಗಿ ಕರ್ನಾಟಕ ಉಚ್ಚ ನ್ಯಾಯಾಲಯ ಖ್ಯಾತ ನ್ಯಾಯವಾದಿ ಪಿ ಕರುಣಾಕರ ಪಾಂಬೇಲು ಹಾಗೂ ಪ್ರದೀಪ್ ಬೊಳ್ಳೂರು, ಶ್ರೀಕಾಂತ್ ಆಚಳ್ಳಿ ಗುತ್ತಿಗಾರು, ಆದರ್ಶ್ ಗೌಡ ಕಟ್ಟ ಇವರುಗಳು ವಾದಿಸಿದರು.