ಅನೇಕ ಸಾಮಾಜಿಕ ಕಾಳಜಿಯೊಂದಿಗೆ ಸ್ಥಾಪಿತವಾಗಿರುವ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ)ಯು ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕನ್ನಡ ನಾಡು ನುಡಿ, ಜಲ-ನೆಲದ ಬಗ್ಗೆ ಆಸಕ್ತಿಯನ್ನು ಹೊಂದಿದ್ದು ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದೆ ಇದೀಗ ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜದ ಮಹತ್ತರ ವೇದಿಕೆಯಾದ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆಯು ಕಾರ್ಯಕ್ರಮವು ಆ.24ರಂದು ಮೈಸೂರಿನ ಹೋಟೆಲ್ ಲೀ ರುಚಿಯಲ್ಲಿ ಮಾನವ ಸಂಪನ್ಮೂಲ ನಾವೀನ್ಯ ನಾಯಕರು – ಕೌಶಲ್ಯ ಹಾಗೂ ತಂತ್ರಜ್ಞಾನ* ಎಂಬ ವಿಷಯದ ಬಗ್ಗೆ ಹೆಚ್ಚಿಸುವಿಕೆ ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಗಾರವನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೋಂ) ಇದರ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಅಧ್ಯಕ್ಷತೆಯನ್ನು ವಹಿಸಿದರು
ಕಾರ್ಯಕ್ರಮ ವನ್ನು ಹಿರಿಯ ಮಾನವ ಸಂಪನ್ಮೂಲ ಅಧಿಕಾರಿಗಳಾದ ಡಾ. ಅನಂತ ಗೌಡರವರು ಉದ್ಘಾಟಿಸಿದರು, ಫಾರ್ಮಡ್ ಲಿಮಿಟೆಡ್ ನ ಖ್ಯಾತ ತರಬೇತುದಾರರಾದ ಸಹಾಯಕ ಕಮಲ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ವಿಕ್ರಂ ಸಾಗರ್ ಸಕ್ಸೇನಾ ರವರು ತರಬೇತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಸುಮಾರು 40ಕ್ಕೂ ಅಧಿಕ ವೃತ್ತಿಪರರು ಭಾಗವಹಿಸಿದರು
ಕಾರ್ಯಕ್ರಮ ಸಂಯೋಜಕರಾದ ಶಶಿಕಾಂತ್ ಬೆಡಸೂರು ಸ್ವಾಗತಿಸಿದರು
ಮಂಜುನಾಥ್ ಹಿರಿಯೂರು ಕಾರ್ಯಕ್ರಮ ನಿರೂಪಿಸಿದರು