ತನ್ವಿ ಚಿಕ್ಮುಳಿ ಯೋಗಾಸನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ

0


ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸುಳ್ಯ ಹಾಗೂ ಪಯಸ್ವಿನಿ ಅನುದಾನಿತ ಪ್ರೌಢಶಾಲೆ ಜಾಲ್ಸೂರು ಇದರ ಜಂಟಿ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಯೋಗಾಸನ ಸ್ಪರ್ಧೆ ಆ. ೨೪ ರಂದು ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರುನಲ್ಲಿ ಆಯೋಜಿಸಲಾಗಿತ್ತು.


ನಿರಂತರ ಯೋಗ ಕೇಂದ್ರ ಪಂಜ ಇಲ್ಲಿಯ ವಿದ್ಯಾರ್ಥಿನಿ ತನ್ವಿ ಎಂ.ಜಿ. ಚಿಕ್ಮುಳಿ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಚತುರ್ಥ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಕುಮಾರ ಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ದಲ್ಲಿ ೧೦ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ರವರು ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ.