ಪಂಜ ವಲಯದ ಭಜನಾ ಪರಿಷತ್ ನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ವಲಯದ ಭಜನಾ ಮಂಡಳಿಯ ವಿಶೇಷ ಸಭೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸುಳ್ಯ ತಾಲೂಕು ಪಂಜ ವಲಯ. ಭಜನಾ ಪರಿಷತ್ ಸುಳ್ಯ ತಾಲೂಕು ಪಂಜ ವಲಯ ಇದರ ಸಭೆಯನ್ನು ಆ.28 ರಂದು ಪಂಜ ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ನಡೆಯಿತು.

ವಲಯ ಭಜನಾ ಪರಿಷತ್ ಸ್ಥಾಪಕಧ್ಯಕ್ಷ ವಿಶ್ವನಾಥ ರೈ ಅರ್ಗುಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ಯತೀಶ್ ದುಗ್ಗಲಡ್ಕ ರವರು ಮಾತನಾಡಿ ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 29 ರವರೆಗೆ ಧರ್ಮಸ್ಥಳ ದಲ್ಲಿ ನಡೆಯುವ ಭಜನಾ ಕಮ್ಮಟದ ತರಬೇತಿ ಹಾಗೂ ಮಂಗಳೊತ್ಸವ ಕಾರ್ಯಕ್ರಮದಲ್ಲಿ ವಲಯದಿಂದ ಆಸಕ್ತ ಅಭ್ಯರ್ಥಿಗಳನ್ನು ಕಳುಹಿಸಿಕೊಡುವ ಕುರಿತು ಮತ್ತು ಸಂಪಾಜೆ ವಲಯದಲ್ಲಿ ನಡೆಯುವ ಭಜನೋತ್ಸವ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಗಳು ಭಾಗವಹಿಸುವ ಕುರಿತು ಮಾಹಿತಿಯನ್ನು ನೀಡಿದರು.

ನಂತರ ವಲಯದಲ್ಲಿ ಪ್ರಸ್ತುತ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಪದಾಧಿಕಾರಿಗಳ ಸ್ಥಾನಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಎಲ್ಯಣ್ಣ ಗೌಡ,ಉಪಾಧ್ಯಕ್ಷರಾಗಿ ಶ್ರೀಮತಿ ನಿರ್ಮಲ, ಜೊತೆ ಕಾರ್ಯದರ್ಶಿಯಾಗಿ ನಾರಾಯಣ ಶಿರಾಜೆ ,ಕೋಶಾಧಿಕಾರಿಯಾಗಿ ಗುರುಪ್ರಸಾದ್ ತೋಟ ರವರನ್ನು ಆಯ್ಕೆ ಮಾಡಲಾಗಿದೆ .ಕಾರ್ಯದರ್ಶಿ ಪ್ರಕಾಶ್ ನರಿಯಂಗ ರವರು ಮುಂದುವರೆಯುವಂತೆ ತೀರ್ಮಾನಿಸಲಾಯಿತು.

ಭಜನಾ ಪರಿಷತ್ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ
ರವರು ಶುಭ ಹಾರೈಸಿದರು. ತಾಲೂಕು ಭಜನಾ ಪರಿಷತ್ತಿನ ನಿರ್ದೇಶಕ ಚಂದ್ರಕಾಂತ ಎಂ ಎಂ ಸಭಾಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಲ್ಯಣ್ಣ ಗೌಡರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಭಜನಾ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಲಯದ ಸೇವಾಪ್ರತಿನಿಧಿ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸೇವಾಪ್ರತಿನಿಧಿ ರೋಹಿಣಿ ನಿರೂಪಿಸಿದರು. ವಲಯದ ಮೇಲ್ವಿಚಾರಕಿ ಕಲಾವತಿ ಸ್ವಾಗತಿಸಿದರು.ಸೇವಾಪ್ರತಿನಿಧಿ ಭವ್ಯ ವಂದಿಸಿದರು. ವಲಯದ ಸೇವಾಪ್ರತಿನಿಧಿ ಕವಿತ, ಧನ್ಯ, ವೀಣಾ, ಕಾವೇರಿ, ಉಪಸ್ಥಿತರಿದ್ದರು.