ಐವರ್ನಾಡು – ದೇರಾಜೆ – ಶೇಣಿ ಸಂಪರ್ಕ ರಸ್ತೆಯನ್ನು ಪ್ರಧಾನಮಂತ್ರಿ ಸಡಕ್ ರಸ್ತೆಯನ್ನಾಗಿಸಿ, ಕಾಮಗಾರಿ ನಡೆಸುವ ಬಗ್ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಐವರ್ನಾಡು ಗ್ರಾಮ ಪಂಚಾಯತಿ ಬಳಿಯಿಂದ ದೇರಾಜೆ – ಶೇಣಿಯ ತನಕ ಸುತ್ತಲಿನ ಸುಮಾರು ಏಳುನೂರಕ್ಕೂ ಮಿಕ್ಕಿದ ಮನೆಗಳ ಜನವಸತಿ ಪ್ರದೇಶ, ಪರಿಶಿಷ್ಟ ಜಾತಿಯ ನಿಸರ್ಗ ಹಾಗೂ ಅಜ್ಜಮೂಲೆ ಎಂಬ ಎರಡು ಕಾಲೋನಿಯ ಸುಮಾರು ಎಪ್ಪತ್ತಕ್ಕೂ ಮಿಕ್ಕಿದ ಮನೆಗಳು, ಗ್ರಾಮ ದೇವಸ್ಥಾನ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆಯೂ ಮತ್ತು ಎರಡು ಗ್ರಾಮಗಳಾದ ಐವರ್ನಾಡು ಹಾಗೂ ಅಮರಪಡ್ನೂರು ಗ್ರಾಮಗಳನ್ನೂ ಸೇರಿಸುವ ಅತೀ ಆವಶ್ಯಕ ರಸ್ತೆ ಸಂಪರ್ಕ ಹಲವಾರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು ಮಹಿಳೆಯರು, ಹಿರಿಯ ನಾಗರಿಕರು, ಬಾಡಿಗೆ, ಖಾಸಗಿ ವಾಹನದಾರರು, ಕೃಷಿಕರು ತಾವು ಬೆಳೆದ ಬೆಳೆಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ಹೋಗಲು ಶಾಲಾ ಮಕ್ಕಳು ಶಾಲಾ-ಕಾಲೇಜಿಗೆ ಹೋಗಲು ಬಡವರು ರೇಷನ್ ತರಲು ಮತ್ತು ಆಸ್ಪತ್ರೆಗೆ ಹೋಗಿ ಬರಲು ಕಷ್ಟವಾಗಿದ್ದು,ಪ್ರತೀ ವರ್ಷ ಸುರಿದ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು ಈ ರಸ್ತೆಯ ಶಾಶ್ವತ ಪರಿಹಾರಕ್ಕಾಗಿ 5 ಕಿ.ಮೀ. ದೂರವಿರುವ ಈ ರಸ್ತೆ ಯನ್ನು ಪ್ರದಾನಮಂತ್ರಿ ಗ್ರಾಮ ಸಡಕ್ ರಸ್ತೆಗೆ ಸೇರಿಸಿ ಕಾಮಗಾರಿ ನಡೆಸಿಕೊಡಬೇಕಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಸಚಿವ ಎಸ್.ಅಂಗಾರ, ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ನಂದಕುಮಾರ್ ಬಾರೆತ್ತಡ್ಕ ರವರ ನಾಯಕತ್ವದಲ್ಲಿ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಮೋಹನ್ ಬೋಳುಗುಡ್ಡೆ,ರಕ್ಷಿತ್ ಸಾರಕುಟೇಲು,ಕಿಶನ್ ಜಬಳೆ,
ಅನಿಲ್ ದೇರಾಜೆ,ನಿಕಿಲ್ ಮಡ್ತಿಲ,ಅಜಿತ್ ಐವರ್ನಾಡು,
ಅರುಣ್ ಗುತ್ತಿಗಾರುಮೂಲೆ,ಅನಿಲ್ ಕುತ್ಯಾಡಿ ,ಪ್ರೀತಮ್ ಕೋಡ್ತಿಲು
ನವೀನ್ ಸಾರಕೆರೆ ಉಪಸ್ಥಿತರಿದ್ದರು.