ಅರಂತೋಡು: ಸಮಗ್ರ ಬೆಳೆ ನಿರ್ವಹಣೆ ಕುರಿತು ಮಾಹಿತಿ ಮಂಥನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ

0

ಅರಂತೋಡು -ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಅರಂತೋಡು ಗ್ರಾಮ ಪಂಚಾಯತ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ಸುಳ್ಯದ ಇನ್ನರ್ ವಿಲ್ ಕ್ಲಬ್ ಜಂಟಿ ಆಶ್ರಯದಲ್ಲಿ ಕೃಷಿಯ ಸಮಗ್ರ ಬೆಳೆ ನಿರ್ವಹಣೆಯ ಕುರಿತು ಮಾಹಿತಿ – ಮಂಥನ ಕಾರ್ಯಕ್ರಮ ಮತ್ತು ಉಚಿತ ನೇತ್ರ ತಪಾಸಣಾ ಶಿಬಿರವು ಆ.29ರಂದು ಆರಂತೋಡು ಸಹಕಾರಿ ಸಂಘದ “ಸಿರಿ ಸೌದ ” ಸಭಾಂಗಣದಲ್ಲಿ ಜರುಗಿತು.

ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಹಕಾರಿ ಸಂಘದ ಸಭಾಂಗಣದಲ್ಲಿ ಕೃಷಿಯ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಗ್ರಾ.ಪಂ. ಸಭಾಂಗಣದಲ್ಲಿ ನೇತ್ರ ತಪಾಸಣಾ ಕಾರ್ಯಗಳು ನಡೆದವು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು, ಇಂದೋರ್ ನ ಶ್ರೀ ಸಿದ್ದಿ ಎಗ್ರಿ ಪ್ರೈವೇಟ್ ಲಿಮಿಟೆಡ್ ನ ಪೆರುವೋಡಿ ನಾರಾಯಣ ಭಟ್, ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಚಿಂತನಾ ಸುಬ್ರಹ್ಮಣ್ಯ, ಪ್ರಗತಿಪರ ಕೃಷಿಕರುಗಳಾದ ಶ್ರೀನಿವಾಸ ನಿಡಂಜಿ, ಜೇಡ್ಲಾ ಶ್ರೀಧರ್ ಭಟ್, ರೋಟರಿ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಯೋಗಿತಾ ಗೋಪಿನಾಥ್, ಪ್ರಸಾದ್ ನೇತ್ರಾಲಯದ ವೈದ್ಯರಾದ ಡಾ l ಅವನ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ಣಾಧಿಕಾರಿ ವಾಸುದೇವ ನಾಯಕ್ ಸ್ವಾಗತಿಸಿ, ಸಿಬ್ಬಂದಿ ನಯನ ಕುಮಾರ್ ಕಿರ್ಲಾಯ ವಂದಿಸಿದರು. ಆರಂತೋಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ ಆರ್. ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ನಿರ್ದೇಶಕರುಗಳು, ಪಂಚಾಯತ್ ಸದಸ್ಯರುಗಳು, ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ನ ಸದಸ್ಯರು ಮತ್ತು ಪದಾಧಿಕಾರಿಗಳು,ಆರಂತೋಡು -ತೊಡಿಕಾನ ಅವಳಿ ಗ್ರಾಮಗಳ ಗ್ರಾಮಸ್ಥರಲ್ಲದೆ ನೆರೆಯ ಗ್ರಾಮಗಳ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.