ಅನ್ಸಾರಿಯಾ ಮಾಸಿಕ ಸ್ವಲಾತ್ ಮಜ್ಲಿಸ್

0

ಅನ್ಸಾರಿಯಾ ಮಾಜಿ ಅಧ್ಯಕ್ಷ ದಿ| ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಅನುಸ್ಮರಣೆ

ಅನ್ಸಾರಿಯಾ ಎಜುಕೇಶನ್ ಸೆಂಟರ್ ಸುಳ್ಯ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಅನ್ಸಾರಿಯಾ ಮಾಜಿ ಅಧ್ಯಕ್ಷ ದಿ|ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ ಅನುಸ್ಮರಣೆ ಕಾರ್ಯಕ್ರಮ ಆ.30 ರಂದು ಅನ್ಸಾರಿಯಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಕೆ.ಎಂ ವಹಿಸಿದರು.


ಸಯ್ಯದ್ ಶರಪುದ್ದೀನ್ ಅಲ್ ಹೈದ್ರೊಸಿ ತಂಙಳ್ ಎರುಮಾಡ್ ಸ್ವಲಾತ್ ಮಜ್ಲಿಸ್ ನೇತ್ರತ್ವ ವಹಿಸಿ ದುವಾಶಿರ್ವಚನ ಮಾಡಿದರು.
ಅನ್ಸಾರಿಯಾ ಹಿಪ್ಳ್ ಕಾಲೇಜು ಪ್ರಾಧ್ಯಾಪಕ ಹಾಫಿಳ್ ಹಾಮಿದ್ ಹಿಮಮಿ ಸಖಾಫಿ ಮುಖ್ಯ ಪ್ರಭಾಷಣ ಮಾಡಿದರು.
ಅನ್ಸಾರಿಯಾ ದಹವಾ ಕಾಲೇಜು ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ ಅನ್ಸಾರಿಯಾ ಸ್ವಲಾತ್ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿ ದಿ|ಅಬ್ಬಾಸ್ ಹಾಜಿ ಯವರ ಅನುಸ್ಮರಣೆ ಮಾಡಿದರು.
ವೇದಿಕೆಯಲ್ಲಿ ಅನ್ಸಾರ್ ಅಧ್ಯಕ್ಷ ಅಬ್ದುಲ್ಲಾ ಹಾಜಿ ಕಟ್ಟೆಕ್ಕಾರ್,ಅನ್ಸಾರಿಯಾ ಉಪಾಧ್ಯಕ್ಷ ಎಸ್ ಪಿ ಅಬೂಭಕ್ಕರ್, ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಹಮೀದ್ ಬೀಜಕೊಚ್ಚಿ,ಅನ್ಸಾರಿಯಾ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ,ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಸಂಚಾಲಕ ಹಾಜಿ ಎಸ್ ಎಂ ಅಬ್ದುಲ್‌ ಹಮೀದ್, ಗಾಂಧಿನಗರ ಜುಮ್ಮಾ ಮಸೀದಿ ಮದರಿಸ್ ಇರ್ಪಾನ್ ಸಖಾಫಿ, ಅನ್ಸಾರಿಯಾ ಸಹಾಯಕ ಮದರಿಸ್ ಹಾಪಿಳ್ ಕಬೀರ್ ಹಿಮಮಿ ಸಖಾಫಿ, ನಿರ್ದೇಶಕರಾದ ಉಮ್ಮರ್ ಕೆ ಎಸ್,ಸಿದ್ದಿಕ್ ಕೊಕ್ಕೊ,ಹಾಜಿ ಅಬ್ದುಲ್‌ ಶುಕೂರ್, ಸಿದ್ದೀಕ್ ಕಟ್ಟೆಕ್ಕಾರ್, ಉಮ್ಮರ್ ಕೊಲ್ಚಾರ್,ಶಾಫಿ ಕುತ್ತಮೊಟ್ಟೆ, ಬಿಎಂ ಅಬೂಭಕ್ಕರ್ ಹಾಜಿ, ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು