ಪಂಜ ಅಂಗನವಾಡಿ ಕೇಂದ್ರದಲ್ಲಿ “ತಾಯಿಯ ಹೆಸರಲ್ಲಿ ಒಂದು ಗಿಡ” ನೆಡುವ ಕಾರ್ಯಕ್ರಮ
ಸುಳ್ಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಪೋಷಣ್ ಮಾಸಾಚರಣೆ ಕಾಯ೯ಕ್ರಮದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪಂಜ ಅಂಗನವಾಡಿ ಕೇಂದ್ರದಲ್ಲಿ “ತಾಯಿಯ ಹೆಸರಲ್ಲಿ ಒಂದು ಗಿಡ ” ನೆಡುವ ಕಾಯ೯ಕ್ರಮವನ್ನು ಆ.31 ರಂದು ಆಯೋಜಿಸಲಾಯಿತು. ಕಾಯ೯ಕ್ರಮದ ಉದ್ಘಾಟನೆಯನ್ನು ಕೊರಗ ಸಮುದಾಯದ ರೇಣುಕಾ ಎಂಬ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶ್ರೀಮತಿ ವಿಜಯಲಕ್ಷ್ಮಿ ಉದ್ಘಾಟಿಸಿದರು.
ಸುಳ್ಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶೈಲಜಾ.ಬಿ. ತಾಲೂಕು ಆರೋಗ್ಯ ಅಧಿಕಾರಿ ಡಾ.ನಂದಕುಮಾರ್ , ಸಹಾಯಕ ನಿರ್ದೇಶಕರು (ಗ್ರೇಡ್2) ಸಮಾಜ ಕಲ್ಯಾಣ ಇಲಾಖೆ ಸುಳ್ಯ , ಜಿಲ್ಲಾ ಕೊರಗ ಸಮುದಾಯದ ಅಧ್ಯಕ್ಷರಾದ ಸುಂದರ ನಾಯ್ಕ, ಪಂಜ ವಲಯ ಮೇಲ್ವಿಚಾರಕಿ,ಶ್ರೀಮತಿ ರವಿಶ್ರೀ.ಕೆ, ಬಾಲ ವಿಕಾಸ ಸಮಿತಿ ಅಧ್ಯಕ್ಷರು, ಸ್ತ್ರೀ ಶಕ್ತಿ ಸದಸ್ಯರು, ಪೋಷಕರು , ಕೊರಗ ಸಮುದಾಯದ ತಾಯಂದಿರು , ಅಂಗನವಾಡಿ ಕಾಯ೯ಕತೆ೯ ಈ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು.