ಯೋಗಾಸನದಲ್ಲಿ ಅವನಿ ಎಂ.ಎಸ್.ವಿಭಾಗ ಮಟ್ಟಕ್ಕೆ ಆಯ್ಕೆ

0


ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮೂಡಬಿದಿರೆ, ಬ್ಲೊಸಂ ಆಂಗ್ಲ ಮಾಧ್ಯಮ ಶಾಲೆ ಬೆಳುವಾಯಿ ಇದರ ಜಂಟಿ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟ ದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ – ಬಾಲಕಿಯರ ಯೋಗಾಸನ ಸ್ಪರ್ಧೆ 2024-25ರ 14 ವಯೋಮಾನದ ಬಾಲಕಿಯರ ವಿಭಾಗದ ಅಥ್ಲೆಟಿಕ್ಸ್ ಯೋಗಾಸನ ಸ್ಪರ್ಧೆಯಲ್ಲಿ ಅವನಿ ಎಂ ಎಸ್ ಸುಳ್ಯ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.


ಇವರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿ. ಇವರು ಯೋಗಾಭ್ಯಾಸವನ್ನು ಸಂತೋಷ್ ಮುಂಡಕಜೆ ಮತ್ತು ಪ್ರಶ್ವಿಜ ಸಂತೋಷ್ ಮುಂಡಕಜೆ ಸುಳ್ಯ ಇವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.
ಅವನಿ ಎಂ.ಎಸ್.ಮೋಂಟಡ್ಕ ಶಶಿಧರ ಮತ್ತು ರೇಷ್ಮಾ ದಂಪತಿಯ ಪುತ್ರಿ.