ಪೋಲಿಸ್ ಮಹಾ ನಿರೀಕ್ಷಕ ಅಮಿತ್ ಸಿಂಗ್ ಕುಕ್ಕೆ ಸುಬ್ರಹ್ಮಣ್ಯ ಠಾಣೆ ಭೇಟಿ

0

ಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ಗೌರವ

ಮೊದಲಬಾರಿಗೆ ಪೋಲಿಸ್ ಮಹಾ ನೀರಿಕ್ಷಕರಾದ ಅಮಿತ್ ಸಿಂಗ್ ಸುಬ್ರಹ್ಮಣ್ಯ
ಪೋಲಿಸ್ ಠಾಣೆಗೆ ಭೇಟಿ ಮಾಡಿ ಕುಂದು ಕೊರತೆಗಳ ಬಗ್ಗೆ ಪೊಲೀಸ್ ಸಿಬ್ಬಂದಿಗಳ ಜೊತೆ ಚರ್ಚೆ ಮಾಡಿ
ಹೊಸ ಪೊಲೀಸ್ ಠಾಣೆಯ ವಿಕ್ಷಣೆ ಮಾಡಿದರು.

ಈ ಸಂದರ್ಭಕುಕ್ಕೆ ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು
ಪಶ್ಚಿಮ ವಲಯಕ್ಕೆ ಸಂಬಂಧ ಪಟ್ಟ 4ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣಕನ್ನಡ, ಚಿಕ್ಕಮಂಗಳೂರು ವ್ಯಾಪ್ತಿಯಲ್ಲಿ ಯಾವುದೇ ಕೋಮು ಗಲಭೆಗಳು ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಕ್ಷಣ ನಮ್ಮ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗಳು ಸ್ಪಂದಿಸುತ್ತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕರ್ತವ್ಯ ನಿಷ್ಠೆಯನ್ನು ಮೆರೆದಿರುತ್ತಾರೆ ಮತ್ತು ಯಾವುದೇ ಘಟನೆಗಳು ಸಂಭವಿಸಿದಲ್ಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ಅತೀ ವೇಗವಾಗಿ ಸುದ್ದಿಗಳು ತಿಳಿಯುತ್ತವೆ. ಈ ನಿಟ್ಟಿನಲ್ಲಿ ಪತ್ರಕರ್ತರು ಸಮಾಜ ಸೇವೆಯುಳ್ಳವರಾಗಿರುತ್ತಾರೆಂದರು.

ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ:

ಕುಕ್ಕೆ ಸುಬ್ರಹ್ಮಣ್ಯ ದೇಶ ವಿದೇಶದಲ್ಲಿ ಪ್ರಸಿದ್ಧವಾದ ಕ್ಷೇತ್ರವಾಗಿದ್ದು ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ನಿತ್ಯ ಇಬ್ಬರು ಪೋಲಿಸ್ ಕಾನ್ಸ್ಟೇಬಲ್ ನಿಯೋಜನೆ ಬಹಳ ಮುಖ್ಯ ಇದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆಂದರು.
ಈ ಸಂಧರ್ಭದಲ್ಲಿ ಪೋಲಿಸ್ ಅಧೀಕ್ಷಕರಾದ ಯತೀಶ್, ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ರಾಜೇಂದ್ರ ಕುಮಾರ್, ಪೋಲಿಸ್ ಉಪ ಅಧಿಕ್ಷಕರಾದ ಅರುಣ್ ನಾಗೇಗೌಡ, ಸುಬ್ರಹ್ಮಣ್ಯ ಪೊಲೀಸ್ ಉಪನಿರಿಕ್ಷಕರಾದ ಕಾರ್ತಿಕ್ ಕೆ ಮತ್ತು ಮಹೇಶ್ ಉಪಸ್ಥಿತರಿದ್ದರು.